ಗುತ್ತಿಗೆದಾರ ಸಚಿನ್ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ?: ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ಪ್ರಶ್ನೆ

Bharath Vaibhav
ಗುತ್ತಿಗೆದಾರ ಸಚಿನ್ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ?: ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ಪ್ರಶ್ನೆ
WhatsApp Group Join Now
Telegram Group Join Now

ಬೆಂಗಳೂರು: ಪ್ರಿಯಾಂಕ್ ಖರ್ಗೆಯವರೇ, ಸಬಿನ್ ಪಾಂಚಾಳ್ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.ಒಬ್ಬ ಸಾಯ್ತಾನೆ, ಸಾಯುವ ವಿರ್ಧಾರ ತೆಗೆದುಕೊಳ್ತಾನೆ ಎಂದಾದರೆ ಮನಸ್ಸನ್ನ ಎಷ್ಟು ಕಟುವಾಗಿ ಮಾಡಿ ಆ ನಿರ್ಧಾರ ತೆಗೆದುಕೊಳ್ತಾವೆ.

ಈ ಸಾವಿಗೆ ಈಶ್ವರಪ್ಪನವರೇ ಹೊಣೆ. ಅವರನ್ನು ವಜಾ ಮಾಡಬೇಕೆಂದು ಪ್ರಿಯಾಂಕ್ ಖರ್ಗೆಯವರು ಹಿಂದೆ ಹೇಳಿದ್ದರು ಎಂದು ಗಮನ ಸೆಳೆದರು. ನಿಮ್ಮ ಮಾತುಗಳು ಈಗಲೂ ಯೂ ಟ್ಯೂಬಿನಲ್ಲಿ ಲಭ್ಯವಿದೆ. ತೆಗೆದು ನೋಡಿ ಎಂದು ಒತ್ತಾಯಿಸಿದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆಯವರು ತಾನು ಉಳಿದವರಿಗೆ ಕೇಳುವುದು ತನಗೆ ಅನ್ವಯವಾಗುವುದಿಲ್ಲ ಎಂಬ ನೀತಿ ಹೊಂದಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ, ನೀವು ಈಶ್ವರಪ್ಪನವರ ಮೇಲೆ ಅಪಾದನೆ ಬಂದಾಗ ಏನ ಮಾತನಾಡಿದ ರಂದು ನೆನಪಿಸಿಕೊಳ್ಳಿ ಎಂದು ಮನವಿ
ಮಾಡಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಹಲವು ಬನಾನಾ ರಿಪಬ್ಲಿಕ್‌ಗಳನ್ನ ಮಾಡಿಕೊಂಡಿದ್ದಾರೆ. ಕಲ್ಕುರ್ಗಿ ರಿಪಬ್ಲಿಕ್, ಬೆಳಗಾವಿ ರಿಪಬ್ಲಿಕ್, ಕನಕಪುರ ದಿಪಬ್ಲಿಕ್- ಹೀಗೆ ಒಂದೊಂದು ಜಿಲ್ಲೆಯನ್ನು ಒಂದೊಂದು ರಿಪಬ್ಲಿಕ್ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. 2025ರಾದರೂ ಕೂಡ ಕಾನೂನು ಎಲ್ಲರಿಗೂ ಸಮಾನವಾಗಿರಲಿ, ಸಂವಿಧಾನ ಎಲ್ಲರಿಗೂ ಅನ್ನಯಿರಲಿ, ಬನಾವಾ ರಿಪಬ್ಲಿಕ್ ಆಗದಂತಿರಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಆಡಿಸಿದರು…

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!