Ad imageAd image

ನೇಕಾರರ ಧ್ವನಿಯಾಗಿ ನಿಲ್ಲುವೆ : ಸಿ. ಟಿ ರವಿ

Bharath Vaibhav
ನೇಕಾರರ ಧ್ವನಿಯಾಗಿ ನಿಲ್ಲುವೆ : ಸಿ. ಟಿ ರವಿ
WhatsApp Group Join Now
Telegram Group Join Now

ಅಮೀನಗಡ: ‘ನೇಕಾರಿಕೆಯು ಅಳಿವಿನ ಅಂಚಿನಲ್ಲಿದ್ದು, ಉತ್ತೇಜನ ನೀಡುವ ನಿಟ್ಟಿನಲ್ಲಿ ನಿಮ್ಮ ಧ್ವನಿಯಾಗಿ ನಿಲ್ಲುವೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

ಪಟ್ಟಣದ ನೇಕಾರ ಕುಟುಂಬಗಳ ಮನೆಗಳಿಗೆ ಭಾನುವಾರ ಭೇಟಿ ನೀಡಿ ಅವರ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು.

ನಂತರ ಹಟಗಾರ ಸಮಾಜದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ನಡೆದ ನೇಕಾರರ ಕುಂದು ಕೊರತೆ ಆಲಿಸುವ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಸರ್ಕಾರಗಳು ಸಂಕಷ್ಟದಲ್ಲಿರುವ ವೃತ್ತಿಗಳನ್ನು ಉಳಿಸಲು ಮುಂದಾಗಬೇಕು. ನೇಕಾರರ ಬದುಕು ದುಸ್ತರವಾಗಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!