ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕುರಿತು ಎಂಎಲ್‌ಸಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ ಈ ಬಜೆಟ್ ಕರ್ನಾಟಕ ಸ್ನೇಹಿತ ಬಜೆಟ್ ಅಂತೂ ಅಲ್ಲವೇ ಅಲ್ಲ ಬದಲಿಗೆ ಮುಸ್ಲಿಮರನ್ನು ಓಲೈಸುವ ಬಜೆಟ್ ಎಂದು ಸಿಟಿ ರವಿ ಹೇಳಿದ್ದಾರೆ.
ರಾಜ್ಯದ ಎಷ್ಟೋ ಹಳ್ಳಿಗಳಲ್ಲಿ ಹೆಣ ಹೂಳಲೂ ಸಹ ಜಾಗವಿಲ್ಲ..ಅಂಥದ್ರಲ್ಲಿ ಖಬರಸ್ಥಾನ ಗೋಡೆ ಕಟ್ಟಲು ಸಿದ್ದರಾಮಯ್ಯ ಕೋಟಿ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಬಜೆಟ್ ನಿಂದ ಮೊಹಮ್ಮದ್ ಅಲಿ ಜಿನ್ನಾ ಆತ್ಮಕ್ಕೆ ಸಂತಸ ಉಂಟಾಗಿದೆ ಎಂದು ರವಿ ಇದೆ ವೇಳೆ ಟೀಕೆ ಮಾಡಿದ್ರು.
ಸಿದ್ದರಾಮಯ್ಯರವರು ನೀಡಿರುವ ಬಜೆಟ್ ಮುಸ್ಲಿಮರ ಮೇಲಿನ ಒಲವನ್ನು ಎತ್ತಿ ತೋರುತ್ತೆ ಎಂದ ರವಿ, ಈ ಕುರಿತು ಪಾಕಿಸ್ತಾನ ನಿರ್ಮಾತೃ ಜಿನ್ನಾಗೆ ಮಾಹಿತಿ ಇದ್ದಿದ್ದರೆ ಆತ ಪಾಕಿಸ್ತಾನಕ್ಕೆ ಹೋಗದೇ ಇಲ್ಲಿಯೇ ಇರುತ್ತಿದ್ದ ಎಂದು ಲೇವಡಿ ಮಾಡಿದ್ದಾರೆ
ಅಲ್ಲದೆ ಸಿದ್ದರಾಮಯ್ಯನವರು ದಾಖಲೆಯ 16ನೆ ಬಾರಿ ಬಜೆಟ್ ಮಂಡಿಸಿದ್ದು, ದೇವರು ಇಷ್ಟು ಬಾರಿ ಬಜೆಟ್ ಮಂಡಿಸುವ ಅವಕಾಶ ಸಿದ್ದರಾಮಯ್ಯನವರಿಗೆ ಕೊಟ್ಟಿದ್ದರೂ ಸಿಎಂ ಮಾತ್ರ ಜನವಿರೋಧಿ ಬಜೆಟ್ ಮಂಡಿಸಿದ್ದಾರೆ ಎಂದು ಸಿಟಿ ರವಿ ಕುಟುಕಿದರು.




