Ad imageAd image
- Advertisement -  - Advertisement -  - Advertisement - 

ಸಾಂಸ್ಕೃತಿಕ ಚಟುವಟಿಕೆಗಳು ಆರೋಗ್ಯಕ್ಕೆ ಸಾಧನ-ಉಪನ್ಯಾಸಕರು ಡಾ.ಸಿದ್ದಪ್ಪ ಕಟ್ಟೆಕಾರ

Bharath Vaibhav
ಸಾಂಸ್ಕೃತಿಕ ಚಟುವಟಿಕೆಗಳು ಆರೋಗ್ಯಕ್ಕೆ ಸಾಧನ-ಉಪನ್ಯಾಸಕರು ಡಾ.ಸಿದ್ದಪ್ಪ ಕಟ್ಟೆಕಾರ
WhatsApp Group Join Now
Telegram Group Join Now

ರಾಮದುರ್ಗ:-ಸಾಂಸ್ಕೃತಿಕ ಚಟುವಟಿಕೆಗಳು ಆರೋಗ್ಯಕ್ಕೆ ಸಾಧನ ಎಂದು ಉಪನ್ಯಾಸಕರಾದ ಡಾ.ಸಿದ್ದಪ್ಪ ಕಟ್ಟೆಕಾರ ಅವರು ಮಾತನಾಡಿದರು
ತಾಲೂಕಿನ ಸುರೇಬಾನ-ಮನಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಸಿದ್ದಪ್ಪ ಕಟ್ಟೆಕಾರ ಅವರು ಮಾತನಾಡಿ

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮನ್ನು ಸಮಾಜ ಗುರುತಿಸುವುದರೊಂದಿಗೆ ವೈಯಕ್ತಿಕ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಉತ್ತಮವಾಗಿರುತ್ತದೆ.

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ದೈಹಿಕ ಚಟುವಟಿಕೆಗಳು ಇಲ್ಲದಾಗಿ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ದೈಹಿಕ ಮಾನಸಿಕ ತೊಂದರೆಗಳಿಗೆ ಸಿಲುಕುವಂತಾಗಿದೆ ಅದರಿಂದ ದೂರವಿರಲು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಪ್ಪದೇ ಭಾಗವಹಿಸಬೇಕು ವಿದ್ಯಾರ್ಥಿಗಳ ಭವಿಷ್ಯತ್ತಿನ ಜೀವನ ಸುಖಮಯವಾಗಿರಲು ಉತ್ತಮ ಗುರಿಯನ್ನು ಹಾಕಿಕೊಂಡು ಅದರ ಈಡೇರಿಕೆಗಾಗಿ ಸದಾ ಪ್ರಯತ್ನಿಸಬೇಕು

 

ಆಕಾಶದಲ್ಲಿ ನಕ್ಷತ್ರವಾಗಿ ಜಗತ್ತನ್ನು ಬೆಳಗುವ ಬದಲು ನಿಮ್ಮ ನಿಮ್ಮ ಮನೆಗೆ ಜ್ಯೋತಿಯಾಗಿ ಬೆಳಗಬೇಕು ಸಾಧನೆ ಮಾಡಲು ಎಲ್ಲರೂ ಸಮರ್ಥರು. ಸಮಾನ ಅವಕಾಶಗಳಿಗೆ ಆದರೆ ಸಾಧಿಸುವ ಮನಸ್ಸಿರಬೇಕು ಎಂದು ಎಂದು ಹೇಳಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಗರಾಜ್. ಪಿ ಇ. ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾದೇವಿ ಬಾಡಗರ ಸಿಂಚನ ಕೃತಿಯನ್ನು ಬಿಡುಗಡೆಗೊಳಿಸಿದರು.

ಪ್ರಾಚಾರ್ಯರಾದ ರಮೇಶ ಮೋಟೆ  ಅಧ್ಯಕ್ಷತೆ ವಹಿಸಿದ್ದರು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶಿವಮೂರ್ತಪ್ಪ ಗುರುವಸಣ್ಣವರ, ಶಿವು ಮೇಟಿ ಮಹಾಂತೇಶ ಮೋಟೆ, ಮಂಜುನಾಥ ಪಾಟೀಲ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ರಮೇಶ ಬಡಿಗೇರ ಉಪಸ್ಥಿತರಿದ್ದರು ಸಾವಿತ್ರಿ ಪಾಟೀಲ ಸ್ವಾಗತಿಸಿದರು ಡಾ.ಅಶ್ವಿನಿ ಟಿ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು ಎಸ್ ಬಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು ಪ್ರಕಾಶ ವಡ್ಡರ ವಂದಿಸಿದರು.

ವರದಿ:-ಕುಮಾರ M

WhatsApp Group Join Now
Telegram Group Join Now
Share This Article
error: Content is protected !!