ಚಿಟಗುಪ್ಪ : ಬೀದರ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ತಾಳಮಡುಗಿ ಗ್ರಾಮದಲ್ಲಿ ಸಾಂಸ್ಕೃತಿಕ ನಾಯಕ, ದಲಿತ ಉದ್ದಾರಕ,ಸಮಾನತೆಯ ಹರಿಕಾರನಾದ ಬಸವಣ್ಣನವರ 892ನೇ ಜಯಂತಿಯನ್ನ ಬುಧುವಾರ ರಾತ್ರಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಗ್ರಾಮದ ಮಾಲಿ ಪಾಟೀಲ ಮನೆಯಿಂದ ಪ್ರಾರಂಭವಾದ ಬಸವಣ್ಣನ ಭಾವ ಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬಿದಿ ಮೂಲಕ ಬಸವೇಶ್ವರ ವೃತ್ತದವರೆಗೆ ಭವ್ಯದಿಂದ ಜರುಗಿತ್ತು.
ಬಳಿಕ ಬಸವೇಶ್ವರ ವೃತ್ತದಲ್ಲಿ ಲಿಂಗಾಯತ ಸಮಾಜದ ಅಧ್ಯಕ್ಷ ಅನಿಲಕುಮಾರ ಹಿಲಾಲಪುರ ಅವರು ಷಟಸ್ಥಲ ಧ್ವಜಾರೋಹಣ ನರವೇರಿಸಿದರು.
ಗ್ರಾಮದ ಹಿರಿಯ ಮುಖಂಡರು,ತಾಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಮಂತ ಪಾಟೀಲ,ಓಂಕಾರ ತಂಬಾಕೆ, ಹಾಗೂ ರಾಜಶೇಖರ್ ವಣಕೇರಿ ಬಸವಣ್ಣನ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಅಧ್ಯಕ್ಷ ಅನಿಲಕುಮಾರ ಹಿಲಾಲಪುರ,ಉಪಾಧ್ಯಕ್ಷ ನಾಗಪ್ಪ ಕುರಿಕೋಟಿ,ಕಾರ್ಯದರ್ಶಿ ಮಲ್ಲಪ್ಪ ಮೊಳಕೇರಿ,ಪ್ರಮುಖರಾದ ಬಾಬುರಾವ ಪಾಟೀಲ,ಪಪ್ಪು ಪಾಟೀಲ,ರಾಜಕುಮಾರ ಪಾವಡಶೆಟ್ಟಿ, ಅಶೋಕ ಪಾವಡಶೆಟ್ಟಿ,ಅಶೋಕ ಶೇರಿಕಾರ,ಶೇಖರ ಪಾವಡಶೆಟ್ಟಿ,ಶಾಮರಾವ ಹುಮನಾಬಾದ್,ವೈಜಪ್ಪ ನಿಂಪನ್ನಿ,ರಾಜು ಭಾವಿದೊಡ್ಡಿ,ಅರ್ಜುನ ಕಪಲಾಪುರ,ಸುಧಾಕರ ಗಡ್ಡದೋರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ವರದಿ : ಸಜೀಶ ಲಂಬುನೋರ




