ಬೆಂಗಳೂರು: ಡಿ ಗ್ರೂಪ್ ಶ್ರೀಗಂಧದ ಕಾವಲು ಮುಖ್ಯರಸ್ತೆಯಲ್ಲಿ ಸುಮಾ ಮತ್ತು ಮಧುಸೂದನ್ ಇವರು ಬಾಯಿ ಚಟ ಎಂಬ ಹೋಟೆಲ್ ನಿರ್ಮಿಸಿದ್ದು ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಬಗೆ ಬಗೆಯ ರುಚಿಕರವಾದ ಶುಚಿಯಾದ ಘಮಘಮಿಸುವ ನಾಲಿಗೆಗೆ ರುಚಿ ಬರಿಸುವ ತಿಂಡಿಗಳನ್ನು ತಯಾರಿಸುತ್ತಾರೆ ಹಲವು ಬಗೆಯ ತಿಂಡಿಗಳನ್ನು ತಯಾರಿಸುವ ಕೆಲಸಗಾರರನ್ನು ನೇಮಿಸಿಕೊಂಡು ಸ್ವಚ್ಛತೆಯನ್ನು ಕಾಪಾಡುತ್ತಾ ಗ್ರಾಹಕರ ಮನ ಸೆಳೆಯುತ್ತಿದ್ದಾರೆ ಈ ಸಂದರ್ಭದಲ್ಲಿ ಬಿ.ವಿ ನ್ಯೂಸ್ -5 ಚಾನಲ್ ನಿಂದ ಬಾಯಿ ಚಟ ಹೋಟೆಲ್ ಗೆ ಭೇಟಿ ನೀಡಿ ಆ ಹೋಟೆಲ್ಲಿನ ಶುದ್ರತೆ ರುಚಿ ಶುಚಿಯ ಬಗ್ಗೆ ವಿಚಾರಿಸಿದೆವು ಮತ್ತು ಆ ಹೋಟೆಲ್ ಗೆ ಬರುವ ಗ್ರಾಹಕರನ್ನು ಮಾತನಾಡಿಸಿದಾಗ ಇಲ್ಲಿನ ಬಗೆ ಬಗೆಯ ತಿಂಡಿಗಳು ಶುಚಿಯಾಗಿರುತ್ತದೆ ರುಚಿಯಾಗಿರುತ್ತದೆ ಮತ್ತು ಬಾಯಿ ಚಟ ಎಂಬ ಹೆಸರಿನಂತೆ ನಾಲಿಗೆಗೆ ರುಚಿಯು ತೃಪ್ತಿ ತರುತ್ತದೆ ಮತ್ತು ಮಕ್ಕಳು ಸಹ ಬಾಯಿಚಟ ಹೋಟೆಲ್ ಗೆ ಹೋಗೋಣ ಎನ್ನುತ್ತಾರೆ ಮತ್ತು ತಿಂಡಿಗಳ ಬೆಲೆಯೂ ಸಹ ನಮಗೆ ದುಬಾರಿ ಎನಿಸುವುದಿಲ್ಲ ಎಂದು ಗ್ರಾಹಕರು ಸಂತೋಷದಿಂದ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಲೀಕರು ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತ ನಮಗೆ ಹಣ ಮುಖ್ಯವಲ್ಲ ಗ್ರಾಹಕರ ಸೇವೆ ನಮ್ಮ ಹೊಣೆ ಆದ್ದರಿಂದ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಶುಚಿ ಮತ್ತು ರುಚಿಯಾದ ತಿಂಡಿಗಳನ್ನು ನೀಡುತ್ತಿದ್ದೇವೆ ಎಂದರು.
ವರದಿ : ಅಯ್ಯಣ್ಣ ಮಾಸ್ಟರ್