——————————————————————————-ಐಪಿಎಲ್ ಫೈನಲ್ ಕದನ ಇಂದು
——————————————————————ಯಾರೇ ಕಪ್ ಗೆದ್ದರೂ ಆ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಭಾಗ್ಯ
ಅಹ್ಮದಾಬಾದ್: ಕೋಟ್ಯಂತರ ಆರ್ ಸಿಬಿ ಫ್ಯಾನ್ ಗಳ ಕನಸು ಇಂದು ನನಸಾಗುವುದೇ? ಅಥವಾ ತಾನೂ ಮೊದಲ ಬಾರಿಗೆ ಐಪಿಎಲ್ ಪ್ರತಿಷ್ಠಿತ ಪ್ರಶಸ್ತಿ ಎತ್ತಿ ಹಿಡಿಯಬೇಕೆಂಬ ಪಂಜಾಬ್ ಕಿಂಗ್ಸ್ ಆಸೆ ಈಡೇರುವುದೇ? ಈ ಯಕ್ಷ ಪ್ರಶ್ನೆಗೆ ಇಂದು ರಾತ್ರಿ ಉತ್ತರ ದೊರೆಯಲಿದೆ.
ಒಂದು ಕಡೆ ಆಗ್ರೆಷನ್( ಆಕ್ರಮಣಕಾರಿ) ಆಟಗಾರ, ನಾಯಕ ಶ್ರೇಯಸ್ ಅಯ್ಯರ. ಇನ್ನೊಂದು ಕಡೆ ಕೂಲ್ ನಾಯಕ ರಜತ್ ಪಟಿದಾರ. ಇಬ್ಬರೂ ತಮ್ಮ ತಂಡದ ಆಟಗಾರರೊಂದಿಗೆ ಕಪ್ ಎತ್ತಿ ಹಿಡಿಯಲು ಉತ್ಸುಕರಾಗಿ ಕಣಕ್ಕೆ ಇಳಿಯಲಿದ್ದಾರೆ.
ಹೌದು ಇಂದು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಟ್ವೆಂಟಿ-20, 18 ನೇ ಆವೃತ್ತಿಯ ಫೈನಲ್ ಕದನಕ್ಕೆ ವೇದಿಕೆ ಸಜ್ಜಾಗಿದೆ.
ಉಭಯ ತಂಡಗಳು ಬಲಾಢ್ಯ: ಕಾಗದದ ಮೇಲೆ ಹಾಗೂ ಈ ವರೆಗಿನ ಐಪಿಎಲ್ ಎಲ್ಲ ಲೀಗ್ ಪಂದ್ಯಗಳನ್ನು ಗಮನಿಸಿದಾಗ ಹಾಗೂ ಈ ಇಬ್ಬರು ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆಂದರೆ ಎರಡೂ ತಂಡಗಳು ಬಲಾಢ್ಯ ಎಂಬುದರಲ್ಲಿ ಎರಡೂ ಮಾತಿಲ್ಲ. ಎರಡೂ ತಂಡಗಳ ಬ್ಯಾಟಿಂಗ್ ಬಲ ಉಕ್ಕಿನ ಸ್ವರೂಪದಲ್ಲಿದೆ. ಬೌಲಿಂಗ್ ವಿಭಾಗ ಕೂಡ ಎರಡೂ ತಂಡಗಳಲ್ಲಿ ಸದೃಢವಾಗಿದೆ.
ಎರಡೂ ತಂಡಗಳಿಗೂ ಮೊದಲ ಕಪ್: ಐಪಿಎಲ್ ಆರಂಭವಾಗಿ 18 ವರ್ಷಗಳು ಕಳೆದಿವೆ. ಈ ವರೆಗೆ ಆರ್ ಸಿಬಿ ಮೂರು ಫೈನಲ್ ತಲುಪಿದರೂ ಒಂದೂ ಬಾರಿ ಕಪ್ ಗೆದ್ದಿಲ್ಲ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಕೂಡ ಫೈನಲ್ ಗಳ ಸಾಧನೆ ಮಾಡಿದ್ದರೂ ಕಪ್ ಗೆ ಮುತ್ತಿಡುವ ಭಾಗ್ಯ ಪಡೆದಿಲ್ಲ. ಕಾರಣ ಇಂದೂ ಯಾವುದೇ ತಂಡ ಫೈನಲ್ ಗೆದ್ದರೂ ಆ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಭಾಗ್ಯ ದೊರೆಯಲಿದೆ.
ಆರ್ ಸಿಬಿ ಪರ ಹೋಮ, ಹವನ ಪೂಜೆ : ಆರ್ ಸಿಬಿಯ ಕೋಟ್ಯಂತರ ಅಭಿಮಾನಿಗಳು ಫೈನಲ್ ಗೆ ಒಂದೆರಡು ಪೂಜೆಯೇ ದೇವಸ್ಥಾನಗಳಲ್ಲಿ ಪೂಜೆ ಅರ್ಪಿಸಿ ತಮ್ಮ ತಂಡ ಮೊದಲ ಬಾರಿಗೆ ಕಪ್ ಗೆಲ್ಲಲಿ ಎಂದು ದೇವರಲ್ಲಿ ಮೋರೆ ಇಡುತ್ತಿದ್ದಾರೆ. ಅತ್ತ ಸಹಜವಾಗಿ ಪಂಜಾಬ್ ಕಿಂಗ್ಸ್ ಪಾಳಯದಲ್ಲಿಯೂ ಇಂತಹುದೇ ಆಸೆ, ಅಭಿಲಾಷೆ. ಇವೆಲ್ಲ ಕುತೂಹಲ, ಆಸಕ್ತಿಯ ನಡುವೆ ಇಂದು ರಾತ್ರಿ ಯಾವ ತಂಡದ ಕೊರಳಿಗೆ ಪ್ರಶಸ್ತಿ ಮಾಲೆ ಬೀಳಲಿದೆ ಎಂಬುದು ಗೊತ್ತಾಗಲಿದೆ.
ಪಂದ್ಯ ಆರಂಭ: ಸಾಯಂಕಾಲ 7:30