ಬೆಂಗಳೂರು: ಮಹಾತ್ವಾಕಾಂಕ್ಷಿ ಯೋಜನೆಯಾದ ‘ನರೇಗಾ’ ಯೋಜನೆಯನ್ನು ನಾಶ ಮಾಡಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನರೇಗಾ ಉಳಿವಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೨೦ ರ‍್ಷಗಳ ಹಿಂದೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಾರಿಗೆ ತಂದಿದ್ದ ಯೋಜನೆಯನ್ನು ಇಂದು ಬಿಜೆಪಿ ನಾಶ ಮಾಡಲು ಹೊರಟಿದೆ. ಇದನ್ನು ತಡೆಯಲು ಕೆಳಮಟ್ಟದಿಂದ ಹೋರಾಟ ಮಾಡಲಾಗುವುದು ಎಂದರು.
ಮಾತ್ಮಾ ಗಾಂಧಿ ಅವರ ಹೆಸರಿನಲ್ಲಿ ಆರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಕೆಲಸಕ್ಕೆ ಖಾತ್ರಿ ಒದಗಿಸಿತ್ತು. ಈ ಹಕ್ಕೂ ಈಗ ಮೊಟಕಾಗಿದೆ. ಕಾರಣ ರಾಜ್ಯ ಹಾಗೂ ದೇಶದ ಉದ್ದಗಲಕ್ಕೂ ಹೋರಾಟ ರೂಪಸಲಾಗುವುದು ಎಂದರು.
ಹೋರಾಟದ ಅಂಗವಾಗಿ ನಾಳೆ ಜ. ೨೭ ರಂದು ರಾಜಭವನ ಚಲೋ ನಡೆಸಲಾಗುವುದು ಎಂದರು.
‘ನರೇಗಾ’ ಉಳಿವಿಗಾಗಿ ದೇಶಾದ್ಯಂತ ಹೋರಾಟ: : ಡಿ.ಕೆ. ಶಿವಕುಮಾರ್




