Ad imageAd image

ಹಿಂದೂ ಹುಲಿಯನ್ನು ಬೋನಿಗೆ ಹಾಕಿದ ಅಪ್ಪ ಮಕ್ಕಳು: ಶಾಸಕ ಗೋಪಾಲಕೃಷ್ಣ ಬೇಳೂರು

Bharath Vaibhav
ಹಿಂದೂ ಹುಲಿಯನ್ನು ಬೋನಿಗೆ ಹಾಕಿದ ಅಪ್ಪ ಮಕ್ಕಳು: ಶಾಸಕ ಗೋಪಾಲಕೃಷ್ಣ ಬೇಳೂರು
WhatsApp Group Join Now
Telegram Group Join Now

ಆನಂದಪುರ: ಬಿಜೆಪಿ ಈಗ ತತ್ವ ಸಿದ್ಧಾಂತವನ್ನು ಉಳಿಸಿಕೊಂಡಿಲ್ಲ. ಯಡಿಯೂರಪ್ಪನವರ ಹಡಬೆ ದುಡ್ಡಿನಿಂದ ವಿಜಯೇಂದ್ರ ಅಧ್ಯಕ್ಷನಾಗಿದ್ದಾನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಬುಧವಾರ ಆನಂದಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಹಿಂದೂ ಫೈರ್ ಬ್ರಾಂಡ್ ಎನಿಸಿಕೊಂಡಿದ್ದ ಯತ್ನಾಳ್ ರವರನ್ನು ಯಡಿಯೂರಪ್ಪ ಹಾಗೂ ವಿಜೇಂದ್ರ ಬೋನಿಗೆ ಹಾಕಿದ್ದಾರೆ ಎಂದು ಆರೋಪಿಸಿದರು. ಹಿಂದೂಪರ ಹೋರಾಟ ನಡೆಸಿದಂತಹ ಅನಂತ್‌ ಕುಮಾರ್ ಹೆಗಡೆ, ಈಶ್ವರಪ್ಪ, ಸೇರಿದಂತೆ ಅನೇಕರನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಿದೆ. ಇದರಿಂದಾಗಿ ಬಿಜೆಪಿ ಪಕ್ಷ ರಾಜ್ಯದಲ್ಲಿ 66 ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅವನತಿ ಕಾಣಲಿದೆ ಎಂದರು.

ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಶಾಸಕರು. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ವಿದ್ಯುತ್‌, ಇಂಧನ, ಹಾಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ಮಾತ್ರ ಬೆಲೆ ಏರಿಕೆಯನ್ನು ಮಾಡಿಲ್ಲ ಕೇಂದ್ರ ಸರ್ಕಾರ ಟೋಲ್ ಗೇಟ್, ಗ್ಯಾಸ್, ರಸಗೊಬ್ಬರ ಸೇರಿದಂತೆ ಅನೇಕ ವಸ್ತುಗಳ ಬೆಲೆಯನ್ನು ಏರಿಸಿದೆ. ರಾಜ್ಯದ ಬಿಜೆಪಿ ಪಕ್ಷದ ಅಧ್ಯಕ್ಷ, ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವಂತೆ ಕೇಂದ್ರ ಸರ್ಕಾರದ ವಿರುದ್ಧವು ಹೋರಾಟ ಮಾಡಬೇಕು ಎಂದರು.

ಭಾರತ ದೇಶ ಜಾತ್ಯತೀತ ದೇಶವಾಗಿದ್ದು ಎಲ್ಲಾ ಸಮುದಾಯದವರಿಗೂ ಸಮಾನ ಹಕ್ಕು ಇದೆ ಆದರಿಂದ ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ನೀಡಿದ್ದು ಸರಿ ಇದೆ. ಮುಸ್ಲಿಮರನ್ನು ವಿರೋಧಿಸುತ್ತಿರುವ ಬಿಜೆಪಿ ಪಕ್ಷ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಂಜಾನ್ ಹಬ್ಬದಲ್ಲಿ ದೇಶದ ಬಡ 33 ಲಕ್ಷ ಮುಸ್ಲಿಂರಿಗೆ ಕಿಟ್ಟು ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ ತನ್ನ ತತ್ವ ಸಿದ್ಧಾಂತವನ್ನು ಮರೆತು ಹಿಂದೂ ಹುಲಿಗಳನ್ನು ಬೋನಿಗೆ
ಹಾಕುತ್ತಿರುವುದರಿಂದ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದರು.

WhatsApp Group Join Now
Telegram Group Join Now
Share This Article
error: Content is protected !!