ಗುರುಮಠಕಲ್ : ಅತಿ ಹಿಂದುಳಿದ ಜಿಲ್ಲೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿಯೂ ಹಿಂದುಳಿಸಿದ ಜಿಲ್ಲೆಗೆ ಯಾದಗಿರಿಗೆ ಚೊಂಬು ಕೊಟ್ಟಿದ್ದಾರೆ ಎಂದು ಮಾದಿಗ ದಂಡೋರ ಒಳಮೀಸಲಾತಿ ಹೊರಟ ಸಮಿತಿಯ ಗುರುಮಠಕಲ್ ತಾಲೂಕ್ ಅಧ್ಯಕ್ಷ ರವಿ ಬುರನೋಳ ಆರೋಪಿಸಿದ್ದದ್ದಾರೆ
ಬಜೆಟ್ ಕರ್ನಾಟಕವನ್ನು ಇನ್ನಷ್ಟು ಸಾಲದ ಕೂಪಕ್ಕೆ ನೂಕಿದೆ. ಕರ್ನಾಟಕ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಕೊಡುಗೆ ಈ ಬಜೆಟ್ ಕೊಟ್ಟಿದೆ. ಹೀಗಾಗಿ ಇದೊಂದು ಜನ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.
ಇದು ನಮ್ಮ ಯಾದಗಿರಿ ಜಿಲ್ಲೆಯು ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಜಿಲ್ಲೆಗೆ ಎಂಜಿನಿಯರಿಂಗ್ ಕಾಲೇಜು ಘೋಷಣೆಯಾಗುತ್ತದೆ ಮತ್ತು ವಿವಿಧ ರಂಗದಲ್ಲಿ ನಿರುದ್ಯೋಗಿಗಳಿದ್ದರೆ ಅವರಿಗೆ ವಿದ್ಯಾರ್ಥಿಗೆ ತಕ್ಕ ಕೆಲಸ ಸಿಗುತ್ತದೆ ಎಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರು, ಸಚಿವರು, ಸಂಸದರು ಜಿಲ್ಲೆಯ ಬೇಡಿಕೆಗಳನ್ನು ಸಮರ್ಥವಾಗಿ ಮಂಡಿಸದೇ ನಿರ್ಲಕ್ಷ್ಯವಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿಯೇ ಅತಿ ಹಿಂದುಳಿದ ಮಹತ್ವಾಕಾಂಕ್ಷಿ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಬೇಕಾದ ಮಾನ್ಯ ಮುಖ್ಯಮಂತ್ರಿ ಅವರು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾದಿಗ ದಂಡೋರ ಆಪಾದಿಸಿದೆ
ನೆರೆಯ ಜಿಲ್ಲೆಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದರೆ ಜಿಲ್ಲೆಯಲ್ಲಿನ ಮೂವರು ಆಡಳಿತಾರೂಢ ಪಕ್ಷದ ಶಾಸಕರೇ ಇದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ, ಅತ್ತ ಸರ್ಕಾರ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.
ವರದಿ: ರವಿ ಬುರನೋಳ




