ಚಾಮರಾಜನಗರ: SCSP/TSP ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ಖಂಡಿಸಿ ಹಣವನ್ನು ವಾಪಸ್ ತುಂಬುವಂತೆ ಅಗ್ರಹಿಸಿ ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆಮಾಡಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನೆಡೆಸಲಾಯಿತು.
ಜಿಲ್ಲಾ ಸಂಚಾಲಕರಾದ ಸಿ ರಾಜಣ್ಣ ಯರಿಯೂರು ರವರು ಮಾತನಾಡಿ 2013-14ರಲ್ಲಿಸಿದ್ದರಾಮಯ್ಯ ರವರ ಕಾಂಗ್ರೆಸ್ ಸರ್ಕಾರವೇ ತಂದಿದ್ದ SCSP/TSP ಎಂಬ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮಾಡಿರುವ ಯೋಜನೆಯ ಹಣವನ್ನು ಇದೆ ಕಾಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನಾಂಗಕೆ ದ್ರೋಹದ ಕೆಲಸ ಮಾಡ್ತಾ ಇರೋದು ಕಣ್ಣಿಗೆ ಕಾಣ್ತಿದೆ ಕೂಡಲೇ ಸರ್ಕಾರ ಹೆಚ್ಚಾತ್ಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕೆ ಇಟ್ಟಿರುವ ಹಣವನ್ನು ತುಂಬಾಬೇಕು ಇಲ್ಲವಾದರೆ ಇಂದು ಜಿಲ್ಲಾ ಕೇಂದ್ರದಲ್ಲಿ ನೆಡೆಯುತ್ತಿರುವ ಪ್ರತಿಭಟನೆ ರಾಜ್ಯ ಮಟ್ಟದಲ್ಲಿ ಉಗ್ರವಾಗಿ ನೆಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನೆ ಸಂಚಾಲಕರದ ದೊರೆಸ್ವಾಮಿ ಜಾನಿ,ನಂಜುಂಡ ಸ್ವಾಮಿ ಗುಂಡ್ಲುಪೇಟೆ, ತಾಲ್ಲೋಕು ಸಂಚಾಲಕರದ ಅನಿಲ್ ಗೂಳಿಪುರ, ರಂಗಸ್ವಾಮಿ ಗುಂಡ್ಲುಪೇಟೆ, ಶಿವಕುಮಾರ್ ಕುಣಿಗಳ್ಳಿ, ಸುರೇಶ ರಾಮಸಮುದ್ರ ಸರೀಫ್ ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




