ಸಿಂಧನೂರು:ಅ 8 ನಗರದಲ್ಲಿ ನಡೆದ ದಸರಾ ಉತ್ಸವದ ಮೆರವಣಿಗೆಯಲ್ಲಿ ಡಾ. ಬಿ ಆರ್. ಅಂಬೇಡ್ಕರ್ ಅವರ ಸ್ತಬ್ಧ ಚಿತ್ರ ಇಡದೆ ಸಂವಿಧಾನ ಪೀಠಿಕೆ ಹೋದದೆ ಅವಮಾನ ಮಾಡಿದ ತಹಶಿಲ್ದಾರ ಅರುಣ್ ಹೆಚ್. ದೇಸಾಯಿ ರವರನ್ನು ಸೇವೆಯಿಂದ ವಜಾ ಮಾಡುವ ಕುರಿತು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಸಮಿತಿ ಪ್ರತಿಭಟನೆ ನಡೆಸಲಾಯಿತು ಎಂದು ತಾಲೂಕ ಅಧ್ಯಕ್ಷ ವಿರುಪಾಕ್ಷಿ ಸಾಸಲಮರಿ ತಿಳಿಸಿ ತಾಲೂಕು ಪಂಚಾಯತಿ ಆವರಣದಲ್ಲಿ ಇರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹೋರಾಟವನ್ನು ಪ್ರಾರಂಭಿಸಿ
ತಹಶಿಲ್ ಕಚೇರಿ ಮುಂದೆ ಜಮಾವಣೆಗೊಂಡು ತಹಶಿಲ್ದಾರ ಅರುಣ್ ಎಚ್. ದೇಸಾಯಿ ವಿರುದ್ಧ ಘೋಷಣೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಲಿಂಗಸುಗೂರು ಎಸಿ, ಕಚೇರಿಯ ಅಧಿಕಾರಿಯ ಮುಖಾಂತರ ಜಿಲ್ಲಾಧಿಕಾರಿಗಳಿಗೆ, ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಯುವ ಮುಖಂಡ ಹನುಮಂತ ಕರ್ನಿ, ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್, ಮುಖಂಡರಾದ ರಾಮಕೃಷ್ಣ ಭಜಂತ್ರಿ, ಸಂಗನಗೌಡ. ನವೀನ್. ದುರ್ಗಪ್ಪ ಮಲ್ಲಾಪುರ ಶರಣಬಸವ ಸಾಸಲಮರಿ ಸೇರಿದಂತೆ ಅನೇಕರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




