Ad imageAd image

ಜಗಜೀವನ್ ರಾ೦ ಎಂಬ ದಲಿತ ಜ್ಯೋತಿ ನಮ್ಮ ಭಾರತದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ: ತಹಸಿಲ್ದಾರ್ ಟಿ ಜಗದೀಶ್

Bharath Vaibhav
ಜಗಜೀವನ್ ರಾ೦ ಎಂಬ ದಲಿತ ಜ್ಯೋತಿ ನಮ್ಮ ಭಾರತದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ: ತಹಸಿಲ್ದಾರ್ ಟಿ ಜಗದೀಶ್
WhatsApp Group Join Now
Telegram Group Join Now

ಮೊಳಕಾಲ್ಮೂರು: ಜಗಜೀವನ್ ರಾ೦ ಎಂಬ ದಲಿತ ಜ್ಯೋತಿ ನಮ್ಮ ಭಾರತದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ.  ಡಾ ಬಾಬು ಜಗಜೀವನ್ ರಾ೦ 118ನೇ ಜಯಂತಿ ಆಚರಣೆಯಲ್ಲಿ ತಹಶೀಲ್ದಾರ್ ಟಿ ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸ್ವತಂತ್ರ ಹೋರಾಟಗಾರ ಹಸಿರು ಕ್ರಾಂತಿಯ ಹರಿಕಾರ ಕಾರ್ಮಿಕರ ನಾಯಕ ದಲಿತ ಮುಖಂಡ ಹೀಗೆ ಹಲವಾರು ಪಾತ್ರಗಳನ್ನು ನೋಡಿದ ಮಹಾನ್ ಸಂತ ಇಂತಹ ವ್ಯಕ್ತಿ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದು ತಹಸಿಲ್ದಾರ್ ಟಿ ಜಗದೀಶ್ ರವರು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಜಗಜೀವನ್ ರಾಮ್ ಅವರ 118ನೇ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಂತರ ದೀನದಲಿತರು ಹಾಗೂ ಎಲ್ಲಾ ವರ್ಗದ ಜನರಿಗೆ ಈ ದೇಶವನ್ನು ಮುನ್ನಡೆಸಿದಂತಹ ಮಹಾ ನಾಯಕ ಅಂದರೆ ತಪ್ಪಾಗಲಾರದು. ಕೇವಲ 25 ವರ್ಷಗಳಲ್ಲಿ ಶಾಸಕರಾಗಿ ಆಯ್ಕೆಯಾದ ವ್ಯಕ್ತಿ ಇವರು ಅನೇಕ ಖಾತೆಗಳನ್ನು ಮುನ್ನಡೆಸಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.

ಜಾತಿಯೆಂಬ ಪಿಡುಗನ್ನು ನಿರಂತರವಾಗಿ ಹೋರಾಡಿದ ಜಗಜೀವನ್ ರಾಮ್ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರು ಹೀಗೆ ಹೇಳುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ ಅವರ ಹಾದಿಯಲ್ಲಿ ನಾವು ನಡೆಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಜಿ ಪ್ರಕಾಶ್ ಮಾತನಾಡಿ ಇವರು 40 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು ಶೋಷಿತರ ದಿನದಲಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದಂತಹ ಮಹಾನ್ ಹೋರಾಟಗಾರರು. ರಾಜಕೀಯದಲ್ಲಿ ಯಾವುದೇ ರಾಜಿ ಇಲ್ಲದೆ ದಕ್ಷ ಆಡಳಿತ ನಡೆಸಿದವರು ಎಂದರು.

ಅದೇ ರೀತಿ ಡಿಎಸ್ಎಸ್ ಮುಖಂಡರಾದ ಕರಿಬಸಪ್ಪ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನ್ ರಾವ್ ರಾಜಕೀಯದಲ್ಲಿ ಅನುಭವಿಸದೆ ಇರುವ ಖಾತೆ ಇಲ್ಲ. ಈ ದೇಶದ ಮೊಟ್ಟ ಮೊದಲ ಕಾರ್ಮಿಕ ಮಂತ್ರಿಯಾಗಿದ್ದರು ಉಪ ಪ್ರಧಾನಿಯವರೆಗೂ ತಮ್ಮ ಆಡಳಿತವನ್ನು ಯಾವುದೇ ಕಲ್ಮಶವಿಲ್ಲದೆ ನಡೆಸಿದ್ದಾರೆ. ನಾವು ನೋಡುವ ಭಾರತದ ಭದ್ರ ಬುನಾದಿಗೆ ಕಾರಣಭೂತರು.

ಇದೇ ಸಂದರ್ಭದಲ್ಲಿ ಸಿ ಪಿ ಐ ವಸಂತ್ ವಿ ಅಸೋದೆ, ಸಬ್ ಇನ್ಸ್ಪೆಕ್ಟರ್ ಪಾಂಡುರಂಗಪ್ಪ ಮುಖಂಡರುಗಳಾದ ನಾಗಭೂಷಣ್ ಚಂದ್ರು ರಾಯಪುರ ನಾಗೇಂದ್ರ ತಿಪ್ಪೇಸ್ವಾಮಿ ಅರ್ಜುನಳ್ಳಿ ನಾಗರಾಜ್ ಪತ್ರ ಪಂಚಾಯತಿ ಸದಸ್ಯರಾದ ಅಬ್ದುಲ್ಲಾ ಬಡೋವನಾಯಕ ಹನುಮಂತಪ್ಪ ಇನ್ನು ಹಲವು ಮುಖಂಡರು ಅಧಿಕಾರಿಗಳು ಇನ್ನು ಹಲವರು ಪ್ರಸ್ಥಿತರಿದ್ದರು.

ವರದಿ :ಪಿಎಂ ಗಂಗಾಧರ 

WhatsApp Group Join Now
Telegram Group Join Now
Share This Article
error: Content is protected !!