ಸಿಂಧನೂರು : ಅ. 5ರವಿವಾರ ನಗರದ ಪತ್ರಿಕಾ ಭವನದಲ್ಲಿ ದಲಿತ ಮುಖಂಡ ಅಮರೇಶ್ ಗಿರಿಜಾಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿಂಧನೂರು ದಸರಾ ಉತ್ಸವ ಜಂಬೂಸವಾರಿ ಮೆರವಣಿಗೆಯಲ್ಲಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರವರ ಸ್ತಬ್ಧ ಚಿತ್ರ, ಸವಿಧಾನ ಪೀಠಿಕೆ ಇಡದೆ ಅವಮಾನ ಮಾಡಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ ತೋರಿದ ತಾಲೂಕ ದಂಡಾಧಿಕಾರಿ ಅರುಣ್ ಎಚ್. ದೇಸಾಯಿ, ತಾಲೂಕ ಪಂಚಾಯಿತಿ ಇಓ, ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ. ವೆಂಕಟೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಆಗ್ರಹಿಸಿದಸರಾ ಉತ್ಸವ ಜಂಬೂ ಸವಾರಿಯಲ್ಲಿ ಅನೇಕ ಮಹನೀಯರ ಸ್ತಬ್ಧ ಚಿತ್ರ ಇಟ್ಟು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ತಬ್ಧ ಚಿತ್ರ ಇಡದೆ ಅವಮಾನ ಮಾಡಿ
ಉತ್ಸವದಲ್ಲಿ ಕೂಡ ದಲಿತರನ್ನು ಕಡೆಗಣಿಸಿ ಸರಕಾರಿ ಕಾರ್ಯಕ್ರಮ ತಮ್ಮ ಮನೆ ಕಾರ್ಯಕ್ರಮದಂತೆ ವರ್ತಿಸಿದ ತಹಸಿಲ್ದಾರ್, ತಾ. ಪಂ. ಇಓ, ಸಮಾಜ ಕಲ್ಯಾಣ ಅಧಿಕಾರಿಗಳು ಅನವಶ್ಯಕವಾಗಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿದ ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಒಂದು ವೇಳೆ ನಿರ್ಲಕ್ಷ ತೋರಿದರೆ ದಲಿತಪರ ಸಂಘಟನೆಗಳು ಉಗ್ರಹ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ, ದಲಿತ ಮುಖಂಡರಾದ- ವೀರೇಶ್ ಉಪ್ಪಲದೊಡ್ಡಿ. ಎಚ್ ಕೆ. ದಿದ್ದಿಗಿ. ನಿರುಪಾದಿ ಸಾಸಲಮರಿ. ಕಂಠೇಶ್ ಬಸಾಪುರ. ಶಿವಕುಮಾರ ಉಪ್ಪಲದೊಡ್ಡಿ. ಸೇರಿದಂತೆ ಇನ್ನೂ ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




