Ad imageAd image

ವಕೀಲರಾದ ರಾಕೇಶ್ ಕಿಶೋರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bharath Vaibhav
ವಕೀಲರಾದ ರಾಕೇಶ್ ಕಿಶೋರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
WhatsApp Group Join Now
Telegram Group Join Now

ಪಾವಗಡ: ತಾಲ್ಲೂಕುನಲ್ಲಿ ಇರುವ ದಲಿತ ಸಂಘಟನೆಗಳ ಒಕ್ಕೂಟದಿಂದ ದಿನಾಂಕ, 8/10/25 ಬುಧವಾರ ಮಧ್ಯಾಹ್ನ ಒಂದು ಗಂಟೆಯ ಹದಿಮೂರು ನಿಮಿಷಕ್ಕೆ ಸಮಯದಲ್ಲೇ ಭಾರತ ದೇಶದ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ಹುದ್ದೆಯ ಗೌರವಾನ್ವಿತ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿರವರ ಮೇಲೆ ಸುಪ್ರೀಂ ಕೋರ್ಟಿನ ಆವರಣದಲ್ಲಿಯೇ ಚಪ್ಪಲಿ ಎಸೆಯಲು ಪ್ರಯತ್ನ ಪಟ್ಟಿರುವ ವಕೀಲರಾದ ರಾಕೇಶ್ ಕಿಶೋರ್ ವಿರುದ್ಧ ಪಾವಗಡ ಪಟ್ಟಣದಲ್ಲಿ ದಲಿತಪರ ಸಂಘಟನೆಗಳ ವತಿಯಿಂದ ಜಾತ ಮೆರವಣಿಗೆ ನಡೆಸಿ ತಹಸಿಲ್ದಾರ್ ಕಚೇರಿ ಮುಂದೆ ಬರುವ ಬಳ್ಳಾರಿ ಮಾರ್ಗಕ್ಕೆ ಹೋಗುವ ರಸ್ತೆಯನ್ನು ತಡೆದು ವಕೀಲರಾದ ರಾಕೇಶ್ ಕಿಶೋರ್ ಭಾವಚಿತ್ರಕ್ಕೆ ಚಪ್ಪಲಿ ಹಾರವನ್ನು ಹಾಕಿ ದಲಿತ ಸಂಘಟನೆಗಳು ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಹಾಗೂ ಭಾವಚಿತ್ರಕ್ಕೆ ಬೆಂಕಿಯನ್ನು ಅಚ್ಚಿ ವಕೀಲರ ವಿರುದ್ಧ ಪ್ರತಿಭಟನೆ ಮಾಡಿ ಅದೇ ನಂತರ ತಹಸಿಲ್ದಾರ್ ಕಚೇರಿಗೆ ಬೇಟೆ ನೀಡಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಗೌರವಾನ್ವಿತ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿರವರ ಮೇಲೆ ಚಪ್ಪಲಿ ಎಸೆಯಲು ಪ್ರಯತ್ನ ಪಟ್ಟಿರುವ ವಕೀಲರಾದ ರಾಕೇಶ್ ಕಿಶೋರ್ ರವರ ಮೇಲೆ ಮರಣದಂಡನೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಡಿಎಸ್ಎಸ್ ಸಿ ಕೆ ತಿಪ್ಪೇಸ್ವಾಮಿ.

ಈ ವೇಳೆಯಲ್ಲಿ. ಜಿಲ್ಲಾ ಮಾದಿಗ ದಂಡೋರ ಉಪಾಧ್ಯಕ್ಷ ವಲ್ಲೂರ್ ನಾಗೇಶ್. ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ. ದಲಿತ ಸಂಘಟನೆಗಳರಾದ. ಡಿಎಸ್ಎಸ್ ಪೆದ್ದಣ್ಣ. ಕಡಮಲ ಕುಂಟೆ ಹನುಮಂತರಾಯಪ್ಪ. ಡಿಎಸ್ಎಸ್ ಬಿ ಹೊಸಹಳ್ಳಿ ಮಲ್ಲಿಕಾರ್ಜುನ. ವೆಂಕಟರಮಣ. ಎಚ್ ಆರ್ ಎಫ್ ಡಿ ಎಲ್ ಕಡಪಲಕೆರೆ ನರಸಿಂಹಪ್ಪ. ನೆಲಗಾನಹಳ್ಳಿ ಮಂಜು. ರೈತ ಸಂಘದ ಶಿವ. ಪೃಥ್ವಿ ರಾಜ್. ದಾಸರಮ್ಮನಹಳ್ಳಿ ನರಸಿಂಹ. ಹಾಗೂ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರುಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!