Ad imageAd image

ಆರೋಪಿಗಳನ್ನು ಬಂದಿಸುವಂತೆ ದಲಿತ ಸಂಘ ಒಕ್ಕೂಟದಿಂದ ಪೋಲಿಸರ ವಿರುದ್ದ ಪ್ರತಿಬಟನೆ

Bharath Vaibhav
ಆರೋಪಿಗಳನ್ನು ಬಂದಿಸುವಂತೆ ದಲಿತ ಸಂಘ ಒಕ್ಕೂಟದಿಂದ ಪೋಲಿಸರ ವಿರುದ್ದ ಪ್ರತಿಬಟನೆ
WhatsApp Group Join Now
Telegram Group Join Now

ಗೋಕಾಕ : ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಪ್. ಐ.ಆರ್. ಆಗಿ ಎರಡು ದಿನಗಳಾದರೂ ಕೂಡ ಆರೋಪಿಗಳನ್ನು ಬಂದಿಸದ ಕಾರಣ ಗೋಕಾಕ ಡಿವಾಯ್ಎಸ್ಪಿ ಪೋಲಿಸ್ ಠಾಣೆ ಎದುರಗಡೆ ದಲಿತ ಸಂಘಟನೆ ಒಕ್ಕೂಟದ ವತಿಯಿಂದ ಆರೋಪಿಗಳನ್ನು ಬಂದಿಸುವಂತೆ ದಿಕ್ಕಾರ ಕೂಗಿ ಪೋಲಿಸರ ವಿರುದ್ದ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ರಮೇಶ ಮಾದರ ಇವರು ಆರೋಪಿಗಳು ಇರುವ ಸ್ಥಳ ಗೊತ್ತಿದ್ದರೂ ಸಹ ಪೋಲಿಸರು ಅವರನ್ನು ಬಂದಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಇದನ್ನು ನೋಡಿದರೆ ಡಿವಾಯ್,ಎಸ್ಪಿ ಯವರು ನೇರ ಹೊಣೆ ಎಂದು ಗಂಬೀರ ಆರೋಪ ಮಾಡಿದರು.ಅಷ್ಟೆ ಅಲ್ಲ ಹಲ್ಲೆಗೊಳಗಾಗಿ ಗಂಬೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು ಸಹ ಡಿವಾಯ್ ಎಸ್ಪಿ ಯವರು ತನಿಖೆ ಮಾಡಿಲ್ಲ ಎಂದು ಹೇಳಿದರು.

ತಕ್ಷಣ ದಲಿತ ಯುವಕ ಪ್ರಜ್ವಲ ದೊಡ್ಡನ್ನವರ ಇತನ ಆರೋಪಿಗಳನ್ನು ಬಂದಿಸಬೇಕು ಇಲ್ಲದಿದ್ದರೆ ಗೋಕಾಕ ಡಿವಾಯ್,ಎಸ್ಪಿ, ವ್ಯಾಪ್ತಿಯಲ್ಲಿ ಬರುವ ಎಲ್ಲ ಪೋಲಿಸ್ ಠಾಣೆಗಳ ಎದುರು ಪ್ರತಿಬಟನೆ ಮಾಡುತ್ತೇವೆಂದು ಸಿ.ಪಿ. ಆಯ್. ಅವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ಕಾಡಾಪುರ, ಯಮನೆಜರ ಕರಬನ್ನವರ, ರಫೀಕ ಬೊಕರೆ,ಶೆಟ್ಟೆಪ್ಪ ಮೇಸ್ತ್ರಿ ಸೇರಿದಂತೆ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು.

ಮನೋಹರ ಮೇಗೇರಿ
BV5 ನ್ಯೂಸ್ ಗೋಕಾಕ

WhatsApp Group Join Now
Telegram Group Join Now
Share This Article
error: Content is protected !!