Ad imageAd image

ಸರಾಯಿ ಬಂದ ಗಾಗಿ ಮಾನಕಾಪುರದಲ್ಲಿ ದಲಿತ ಮಹಿಳೆಯರು, ಗ್ರಾಮಸ್ಥರಿಂದ ಮುಷ್ಕರ

Bharath Vaibhav
ಸರಾಯಿ ಬಂದ ಗಾಗಿ ಮಾನಕಾಪುರದಲ್ಲಿ ದಲಿತ ಮಹಿಳೆಯರು, ಗ್ರಾಮಸ್ಥರಿಂದ ಮುಷ್ಕರ
WhatsApp Group Join Now
Telegram Group Join Now

ನಿಪ್ಪಾಣಿ :  ನಿಪ್ಪಾಣಿ ತಾಲೂಕಿನ ಕೊನೆಯ ಮಗ್ಗುಗಳ ಗ್ರಾಮ ಮಾನಕಾಪುರದಲ್ಲಿ ಅನಧಿಕೃತ ಸಾರಾಯಿ ಮಾರಾಟ ಮಾಡುತ್ತಿದ್ದು ಸಾರಾಯಿ ಚಟಕ್ಕೆ ಬಲಿಯಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಗ್ರಾಮದಲ್ಲಿ ಯುವಕರು ಸರಾಯಿ ವ್ಯಾಸನಕ್ಕೆ ಬಲಿಯಾಗುತ್ತಿದ್ದಾರೆ.

ಅಕ್ರಮ ಸರಾಯಿ ಮಾರಾಟವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ನಾಲ್ಕು ಬಾರಿ ಗ್ರಾಮ ಪಂಚಾಯಿತಿಗೆ ವಿನಂತಿ ಅರ್ಜಿ ಸಲ್ಲಿಸಿದರೂ ಕ್ಯಾರೆ ಎನ್ನದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗುತ್ತಾ ಗುರುವಾರ ದಲಿತ ಮಹಿಳೆಯರು ಹಾಗೂ ಗ್ರಾಮಸ್ಥರಿಂದ ಬೃಹತ್ ಮೆರವಣಿಗೆಯೊಂದಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ತೆರಳಿ ಮುಷ್ಕರ ನಡೆಸಿದರು.

ಮಧ್ಯಾಹ್ನ 12 ಗಂಟೆಗೆ ನ್ಯಾಯವಾಗಿ ಸಚಿನ್ ಶಿಂದೆ ಹಾಗೂ ದಲಿತ ಸಮಾಜದ ಹಿರಿಯ ಮುಖಂಡ ರಾಹುಲ್ ವರಾಳೆಯವರ ಮುಂದಾಳತ್ವದಲ್ಲಿ ಸೇರಿದ ನೂರಾರು ಮಹಿಳೆಯರು, ಗ್ರಾಮಸ್ಥರು, ಬೃಹತ್ ಮುಷ್ಕರದೊಂದಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ತೆರಳಿ ಕಾರ್ಯಾಲಯದ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಮನವಿ ಸ್ವೀಕರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ ಅಧಿಕಾರಿಗಳಾಗಲಿ ಹಾಜರಿರದ ಕಾರಣ ಅವರು ವಿರುದ್ಧ ಪ್ರತಿಭಟನೆಕಾರರು ನಿಷೇಧ ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಕಳೆದ ಕೇವಲ ಎರಡು ತಿಂಗಳಲ್ಲಿ ಕುಡಿಯುವ ಚಟಕ್ಕೆ ಐವರು ಯುವಕರು ಬಲಿಯಾಗಿದ್ದು ಸಂಪೂರ್ಣ ಗ್ರಾಮದ ಯುವಕರು ಸರಾಯಿ ಚಟಕ್ಕೆ ಅಂಟಿಕೊಳ್ಳುತ್ತಿದ್ದುದ ರಿಂದ ಸಂತಪ್ತಗೊಂಡ ಗ್ರಾಮಸ್ಥರು ಸರಾಯಿ ಬಂದ ಗಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾನಕಾಪುರ ಗ್ರಾಮದ ಹಿರಿಯ ಸಮಾಜ ಸೇವಕ ಧನಂಜಯ ಮಾಳಿ, ಗ್ರಾಮ ಪಂಚಾಯಿತಿ ಸದಸ್ಯ ಜಯಪಾಲ ಚೌಗಲೆ,ಪ್ರಮೋದ್ ಸೇವಾಳೆ, ಹಾಗೂ ಗ್ರಾಮ ಪಂಚಾಯಿತಿ ಕ್ಲಾರ್ಕ್ ಬಾಬಾಸಾಹೇಬ ಅರಗೆ ಪ್ರತಿಭಟನೆಕಾರರಿಂದ ಮನವಿ ಸ್ವೀಕರಿಸಿ, ಆದಷ್ಟು ಬೇಗ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅನಧಿಕೃತ ಸರಾಯಿ ಮಾರಾಟ ಬಂದ್ ಮಾಡಲಾಗುವುದೆಂದು ಭರವಸೆ ನೀಡಿದರು. ಮುಷ್ಕರದಲ್ಲಿ ಮನವಿ ಸ್ವೀಕರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ಮಹಾಕಾಳೆ ಹಾಗೂ ಪಿಡಿಓ ನಂದಕುಮಾರ ಪಫೇ ಗೈರು ಇದ್ದುದರಿಂದ ಗ್ರಾಮಸ್ಥರು ಅವರ ವಿರುದ್ಧ ಘೋಷಣೆ ಕೂಗಿದರು. ಮುಷ್ಕರದಲ್ಲಿ ದಲಿತ ಮಹಿಳೆಯರು, ಗ್ರಾಮಸ್ಥರು, ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!