Ad imageAd image

ನವದುರ್ಗಾವತಾರ ಶ್ರೀ ರೇಣುಕಾ ಯಲಮ್ಮ ದೇವಿ ಪವಾಡ ಕುರಿತು ನೃತ್ಯ ಪ್ರದರ್ಶನ

Bharath Vaibhav
ನವದುರ್ಗಾವತಾರ ಶ್ರೀ ರೇಣುಕಾ ಯಲಮ್ಮ ದೇವಿ ಪವಾಡ ಕುರಿತು ನೃತ್ಯ ಪ್ರದರ್ಶನ
WhatsApp Group Join Now
Telegram Group Join Now

ಐನಾಪುರ: ಪಟ್ಟಣದ ಶ್ರೀ ಕಾಳಿಕಾದೇವಿ ನವರಾತ್ರಿ ಹಬ್ಬದಲ್ಲಿ ಗಮನ ಸೆಳದ ಹುಬ್ಬಳ್ಳಿ ಪ್ರವೀಣ ಬಡಿಗೇರವರ ನಾಟ್ಯ ಭೈರವ ನೃತ್ಯ ತಂಡದಿಂದ  ಆಂಕರ್:ಭಾರತ ದೇಶದಲ್ಲಿ ಮಾತ್ರ ಧಾರ್ಮಿಕತೆಯಿದೆ ಇಲ್ಲಿ ಹೊರತು ಪಡಿಸಿ ಇನ್ನುಳಿದ ಯಾವುದೇ ದೇಶದಲ್ಲಿ ಧಾರ್ಮಿಕತೆಯಿಲ್ಲ ಎಂದು ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಹೇಳಿದರು .


ಅವರು ದಿ 26ರಂದು ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ ಕನ್ನಡ ಸಂಸ್ಕೃತ ಇಲಾಖೆ ಬೆಳಗಾವಿ ಹಾಗೂ ಶ್ರೀ ಕಾಳಿಕಾ ದೇವಿ ವಿಶ್ವಕರ್ಮ ಸಮಾಜ ಮತ್ತು ವಿಶ್ವಕರ್ಮ ವೇದಮಾತಾ ಮಹಿಳಾ ಸಂಘದವರ ಸಹಯೋಗದಲ್ಲಿ ನಡೆದ ನವರಾತ್ರಿ ಪ್ರಯುಕ್ತ, ನವದುರ್ಗಾವತಾರ ನಾಟ್ಯ ಭೈರವ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ದ್ವೀಪ ಪ್ರಜ್ವಲಿಸಿ ಹಾಗೂ ದಿವ್ಯ ಸಾನಿದ್ಯ ವಹಿಸಿ ಆರ್ಶಿವಚನ ನಿಡುತ್ತಾ ನಮ್ಮ ಭಾರತ ದೇಶದಲ್ಲಿ ದೇವಾನು ದೇವತೆಗಳನ್ನು ಪೂಜಿಸಿದ ದೇಶ ನಮ್ಮದು ಮಂಬರುವ ಹಬ್ಬಗಳು ಮನುಷ್ಯನಿಗೆ ಸಂಸ್ಕಾರ,ಒಳ್ಳಯವರಾಗಲು ಹಬ್ಬ ಹರಿ ದಿನ ಗಳಿವೆ ಎಂದ ಅವರು ಭಗವಂತನಿಗೆ ಪದಾರ್ಥಗಳನ್ನು ಮೀಸಲಿಡದೆ ಮನಸ್ಸು ಮೀಸಲಿಡಬೇಕು ಮನಸ್ಸನ್ನು ಕೆಟ್ಟದಕ್ಕೆ ಹರಿಬಿಡದೆ ದೇವರಲಿ ಮನಸ್ಸನ್ನು ಲೀನಮಾಡಿದರೆ ಮನೆ,ಮನಸ್ಸು ಮನೋಭಾವ ತರುವುದೆ ಧಾರ್ಮಿಕ ತೆ ಎಂದರು.


ಹುಬ್ಬಳ್ಳಿ ಪ್ರವೀಣ ಬಡಿಗೇರವರ ನಾಟ್ಯ ಭೈರವ ನೃತ್ಯ ತಂಡದಿಂದ ನವದುರ್ಗಾವತಾರ ಜನ್ಮಾತೆ ಸವದತ್ತಿ ಶ್ರೀ ಯಲಮ್ಮದೇವಿ ಪವಾಡ ಕುರಿತ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕಾಳಿಕಾದೇವಿಯ ಮಂದಿರ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಜಗಮಗ್ಗಿಸುತ್ತಿತು. ನಗರದ ಹಲವಾರುದೇವಸ್ಥಾನಗಳಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ತುಂಬುತ್ತಿವೆ. ಗುಡ್ಡದಮಡಿಯ ಲಕ್ಷ್ಮೀ ದೇವಿ, ದುರ್ಗಾಮಾತಾ ಮಾತಂಗಿ ಗಲಿಯ ಚಂದ್ರವ್ವ ತಾಯಿ ದೇವಸ್ಥಾನ ಇಂದಿರಾನಗರದ ದುರ್ಗಾದೇವಿ ದೇವಸ್ಥಾನಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಸಂಗೀತ, ನಾಟ್ಯ ಮತ್ತು ಭಕ್ತಿರಸದ ಸಹೃದಯದ ಚಿಕ್ಕ ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಮನ ತಣಿಸುತ್ತಿವೆ.
ವೇದಮಾತಾ ಮಹಿಳಾ ಸಮಾಜ ಬಳಗದ ಸದಸ್ಯರಿಂದ ನೃತ್ಯ ಜನ ಮನ ಸೆಳೆಯಿತು.
ಸೌಂದರ್ಯ ಲಹರಿ ಪಾರಾಯಣನಡೆಯಿತು.

ಐನಾಪುರ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರು ಧನ್ಯರಾದರು. ಸಂಜೆ ನಾದಸ್ವರ ವಾದನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೃದಯ ಗೆದ್ದಿತು. ಇ ಸಂದರ್ಭದಲ್ಲಿ ಅಪ್ಪಾಸಾಬ ಬಣಜವಾಡ,ಅರವಿಂದ ಬಡಿಗೇರ,ನಾಗಲಿಂಗ ಬಡಿಗೇರ, ಅಭಿಷೇಕ ಬಡಿಗೇರ, ಸಚೀನ ಬಡಿಗೇರ, ಮೌನೇಶ ಬಡಿಗೇರ, ಮಾಂತೇಶ ಬಡಿಗೇರ, ಸಂದೀಪ ಬಡಿಗೇರ ವೇದಮಾತಾ ಮಹಿಳಾ ಸಮಾಜ ಬಳಗದ ಎಲ್ಲ ಸದಸ್ಯರು ಎಲ್ಲ ಕುಲಭಾಂದವರು ಪಾಲ್ಗೋಂಡಿದರು. ತಮ್ಮಣಾ ಬಡಿಗೇರ ನಿರೂಪಿಸಿದರು.ನಾಗಲಿಂಗ ಬಡಿಗೇರ ವಂದಿಸಿದರು.

ವರದಿ: ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!