ಗುರುಮಠಕಲ್ : ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಜಾತಿ ದ್ವೇಷದಿಂದ ದೌರ್ಜನ್ಯ ವಾಗಿದೆ ಎಂದು ತಿಳಿದು ಯುವಕನ ಮನೆಗೆ ಬಿಟಿ ನೀಡಿದ ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ನವು ನಿಮ್ಮ ನಿಮ್ಮ ಹಿಂದೆ ಇದ್ದೇವೆ ಎಂದು ಯುವಕನಿಗೆ ಹಾಗೂ ಅವರ ಕುಟುಂಬ ಧೈರ್ಯ ತುಂಬಿದ ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ಬಿ ನರಸಪ್ಪ ದಂಡೋರ.

ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಮಾನವೀಯ ಜಾತಿ ದ್ವೇಷದ ಘಟನೆ ನಡೆದಿದೆ. ಮಾದಿಗ ಸಮುದಾಯದ ಒಂದು ಹಿಂದುಳಿದ ದಲಿತ ಯುವಕನು ತನ್ನ ಶ್ರಮದಿಂದ ಓದಿ ವಕೀಲ ವೃತ್ತಿಯಲ್ಲಿ ಸ್ಥಿರವಾಗುತ್ತಿರುವ ಸಂದರ್ಭದಲ್ಲಿಯೇ, ಮೇಲ್ಜಾತಿಯ ಕೆಲವರು ಅವನಿಗೆ ಜಾತಿ ಶಬ್ದಗಳಿಂದ ನಿಂದನೆ ಮಾಡಿ ಕೀಳಾಗಿ ಮಾತಾಡಿ ಎಷ್ಟರಮಟ್ಟಿಗೆ ಸರಿ ಎಂದು ಊರಿನ ಜನರರಿಗೆ ತಿಳಿಸಿದ ನಂತರ ಮಾತನಾಡಿದ ಅವರು ಈ ಕುರಿತು
ಸುರುಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರಿಂದ ವಿಳಂಬವಾಗಿದೆ. ಅದೇ ರಾತ್ರಿಯಲ್ಲಿ ಯುವಕನ ಮನೆಗೆ ದಾಳಿ ಮಾಡಿ, ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿದ ಘಟನೆ ನಡೆಯುವುದು ನಮ್ಮ ಸಮಾಜದ ಕೊಡುಗೆಯಿಲ್ಲದ ಅಸಹ್ಯ ಚಿತ್ರಣ. ಸೋಶಿಯಲ್ ಮೀಡಿಯಾದಲ್ಲಿ ಅಲೆದಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ನರಸಪ್ಪ
ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ಬಿ ನರಸಪ್ಪ ದಂಡೋರ ಅವರು ಇಂತಹ ಜಾತಿ ಆಧಾರಿತ ದೌರ್ಜನ್ಯಗಳು ಹತ್ತಿಕ್ಕಲ್ಪಡಬೇಕು. ನಮ್ಮ ಸಮಾಜದ ಶೋಷಿತ ದಲಿತ ಸಮುದಾಯದ ಮೇಲಿನ ದೌರ್ಜನ್ಯಗಳನ್ನು ಕರ್ನಾಟಕ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಬೇಕು.
ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು, ಪೀಡಿತ ಯುವಕ ಮತ್ತು ಅವನ ಕುಟುಂಬಕ್ಕೆ ಶಾಶ್ವತ ಪೊಲೀಸ್ ರಕ್ಷಣೆ ಒದಗಿಸಬೇಕು.
ಈ ಪ್ರಕರಣವನ್ನು ಮಾನವ ಹಕ್ಕು ಉಲ್ಲಂಘನೆಯ ತೀವ್ರ ಪ್ರಕರಣವಾಗಿ ಪರಿಗಣಿಸಿ, ಶೀಘ್ರ ನ್ಯಾಯ ಒದಗಿಸಬೇಕು.
ಜಾತಿ ಭ್ರಾಂತಿಯ ವಿರುದ್ಧ ರಾಜ್ಯಾದ್ಯಂತ ಶಕ್ತಿಶಾಲಿ ಜಾಗೃತಿ ಅಭಿಯಾನ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಅವರು ಮುಂದುವರೆದು, “ನ್ಯಾಯ ತಡವಾದರೆ ಅದು ಇನ್ನೊಂದು ಅನ್ಯಾಯವಾಗುತ್ತದೆ. ಕರ್ನಾಟಕ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಜಾತಿ ಮೇಲೆ ನಡೆಯುವ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಇದ್ದೇ ಇರುತ್ತದೆ” ಎಂದು ಎಚ್ಚರಿಸಿದ್ದಾರೆ.
ಇಂತಹ ಜಾತಿ ಆಧಾರಿತ ಹಲ್ಲೆ ಹಾಗೂ ಮಾನವೀಯ ಅಪಮಾನಗಳನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ, ಸರ್ಕಾರದ, ಸಮಾಜದ ಜವಾಬ್ದಾರಿ.ಈ ಬಗ್ಗೆ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಮಾದಿಗ ದಡೋರ ರಾಜ್ಯ ಅಧ್ಯಕ್ಷ ನರಸಪ್ಪ ದಂಡೋರ ಅವರು ಆಗ್ರಹಿಸಿದ್ದಾರೆ
ಈ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ರಾಜ್ಯ ಕಾರ್ಯದರ್ಶಿ ಕಶಪ್ಪ ಹೆಗ್ಗಣ್ಣಗೇರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಕಡೇಚುರು ಸುರುಪೂರು ತಾಲೂಕ ಅಧ್ಯಕ್ಷ ಬಸವರಾಜು ಅದಿಮಾನಿ ಇನ್ನು ಮಾದಿಗ ದಂಡೋರ ಜಿಲ್ಲಾ ಪದಾಧಿಕಾರಿಗಳ ಮತ್ತು ಊರಿನ ಸಮಾಜ ಹಿರಿಯರು ಭಾಗಿಯಾಗಿದ್ದರು.
ವರದಿ: ರವಿ ಬೂರನೋಳ




