ಬೆಂಗಳೂರು: ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಸಂಬಂಧ ಮೂರು ಎಫ್‌ಐಆರ್ ದಾಖಲಾಗಿದೆ. ಈ ಕೇಸಲ್ಲಿ ಎರಡು ಎಫ್‌ಐಆರ್ ನಲ್ಲಿ ನಟ ದರ್ಶನ್ ಎ.1 ಆರೋಪಿಯಾಗಿ ಪ್ರಕರಣ ದಾಖಲಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯದ ಪೋಟೋ ವೈರಲ್ ಆದ ಬೆನ್ನಲ್ಲೇ, 7 ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.
ಅಲ್ಲದೇ ಪ್ರಕರಣ ಸಂಬಂಧ ಕೇಂದ್ರ ಕಾರಾಗೃಹದ ಉಪ ನಿರ್ದೇಶಕ ಸೋಮಶೇಖರ್ ನೀಡಿದಂತ ದೂರು ಆಧರಿಸಿ, ಮೂರು ಎಫ್‌ಐಆರ್ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿರುವಂತ ಮೂರು ಕೇಸಲ್ಲಿ ಎರಡು ಪ್ರಕರಣದಲ್ಲಿ ನಟ ದರ್ಶನ್ ಎ1 ಆರೋಪಿಯಾಗಿ ಮಾಡಿ ಎಫ್‌ಐಆರ್ ದಾಖಲಿಸಲಾಗಿದೆ. ಮೊದಲ ಪ್ರಕರಣದಲ್ಲಿ ನಟ ದರ್ಶನ್ ಎ1 ಆರೋಪಿಯಾದರೇ, ಎ2 ಆರೋಪಿಯಾಗಿ ನಾಗರಾಜ್ ಎಂಬುವರನ್ನು ಮಾಡಲಾಗಿದೆ. ಎ.3 ವಿಲ್ಸನ್ ಗಾರ್ಡನ್ ನಾಗ, ಎ4 ಕುಳ್ಳ ಸೀನ ಆಗಿದ್ದಾರೆ.
ಇನ್ನೂ 2ನೇ ಪ್ರಕರಣದಲ್ಲಿ ನಟ ದರ್ಶನ್ ಎ.1 ಆರೋಪಿಯಾಗಿದ್ರೇ, ಎ2 ಆರೋಪಿಯಾಗಿ ಧರ್ಮ, ಎ3ಯಾಗಿ ಸತ್ಯ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂರನೇ ಕೇಸಲ್ಲಿ ಕೆಎಸ್ ಸುದರ್ಶನ್ ಎಂಬಾತನ ವಿರುದ್ಧ ಎ.1 ಆರೋಪಿಯಾಗಿ ಎಫ್‌ಐಆರ್ ದಾಖಲಿಸಿದ್ರೇ, ಎ.2 ಪರಮೇಶ್ ನಾಯಕ್, ಎ.3 ಕೆ.ಬಿ ರಾಯಮನೆ ಮಾಡಲಾಗಿದೆ.