ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು 12 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
13 ಮಂದಿಯನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಆರೋಪಿಗಳಿಗೆ ಪೊಲೀಸರು ಬೆಡ್ ಶೀಟ್, ಕಾರ್ಪೆಟ್ ವ್ಯವಸ್ಥೆ ಮಾಡಿದ್ದಾರೆ.ಪೊಲೀಸ್ ಠಾಣೆಯಲ್ಲಿಯೇ ದರ್ಶನ್ ಮತ್ತು ಗ್ಯಾಂಗ್ ರಾತ್ರಿ ಕಳೆದಿದ್ದಾರೆ.
ತಲೆನೋವು, ಮೈ ಕೈ ನೋವು ಎಂದು ಕೆಲವರು ಹೇಳಿಕೊಂಡಿದ್ದು, ಮಾತ್ರೆ ತರಿಸಿಕೊಡಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ರಾತ್ರಿ ಎಚ್ಚರಗೊಂಡು ಎದ್ದು ಕುಳಿತಿದ್ದರು.
ಬಂಧನದಿಂದ ಚಿಂತಾಕ್ರಾಂತನಾಗಿರುವ ದರ್ಶನ್ ರಾತ್ರಿ ಎದ್ದು ಕುಳಿತುಕೊಂಡಿದ್ದರು ಎನ್ನಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಮುಂಭಾಗ ಕೆಎಸ್ಆರ್ಪಿ ಭದ್ರತೆ ನೀಡಲಾಗಿದೆ.