ಚಡಚಣ : ಶ್ರೀ ದತ್ತ ಇಂಡಿಯಾ ಪ್ರೈ.ಲಿ,ಹಾವಿನಾಳ (ಚಡಚಣ) ಕಾರ್ಖಾನೆಯ ಬೈಲರ ಅಗ್ನಿಪ್ರದೀಪನ ಕಾರ್ಯಕ್ರಮ ಮುಕ್ತಾಯ ಮತ್ತು 7.00 ಲಕ್ಷ ಮೆ. ಟನ್ ಕಬ್ಬು ನುರಿಸುವ ಉದ್ದಿಷ್ಟ – ಮೃತ್ಯುಂಜಯ ಶಿಂದೆ
ಹಾವಿನಾಳ – ಘಟಸ್ಥಾಪನೆಯ ಶುಭ ಮೂಹರ್ತದಲ್ಲಿ ಕಾರ್ಖಾನೆಯ ಬೈಲರ್ ಅಗ್ನಿ ಪ್ರದೀಪನ ಕಾರ್ಯಕ್ರಮವು ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಮಹಂತ್ ಪ.ಪೂ. ವಿದ್ವಾಂಶ ಶ್ಯಾಮಸುಂದರ್ ಶಾಸ್ತ್ರಿ ಮಹಾರಾಜರು, ಕಂಪನಿಯ ಸಂಚಾಲಕರಾದ ಮಾನ್ಯ ಚೇತನ ಧಾರು ದಾದಾ, ರಾಜ್ಯ ಶಿಕರ್ ಬ್ಯಾಂಕಿನ ಸಂಚಾಲಕ ಅವಿನಾಶ್ ಮಹಾಗವಕರ್, ಕಂಪನಿಯ ಉಪಾಧ್ಯಕ್ಷರಾದ ಮಾನ್ಯ ಮೃತ್ಯುಂಜಯ ಶಿಂಧೆ ಮತ್ತು ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯ ಸಂತೋಷದ ವಾತಾವರಣದಲ್ಲಿ ಕಾರ್ಯಾಕ್ರಮ ಮುಕ್ತಾಯ ಮಾಡಲಾಯಿತು. ಸದರಿ ಬಾಯಿಲರ್ ಪೂಜೆಯ ಮಾನವನ್ನು ಕಾರ್ಖಾನೆಯ ಇಂಜಿನಿಯರ್ ಶ್ರೀ ಕಂಟೆಪ್ಪಾ ಸೊನಗೆ ಮತ್ತು ಅವರ ಧರ್ಮ ಪತ್ನಿಯಯಿಂದ ಮಾಡಿಸಲಾಯಿತು.
ಕಂಪನಿಯ ಉಪಾಧ್ಯಕ್ಷರಾದ ಮಾನ್ಯ ಮೃತ್ಯುಂಜಯ ಶಿಂಧೆಯವರು ಮಾತನಾಡಿ ಇದು ನಮ್ಮ ಕಂಪನಿಯ ನಾಲ್ಕನೆಯ ಕಬ್ಬು ನುರಿಸುವಿಕೆ ಹಂಗಾಮವಿದ್ದು ಅಕ್ಟೋಬರ 20ನೆಯ ತಾರೀಖಿನ ವರೆಗೆ ಪ್ರಾರಂಭಿಸಲಾಗುವುದೆಂದು ಹೇಳಿದರು ಅದರಂತೆ ಕಾರ್ಖಾನೆಯ ಮಶಿನರಿ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಮುಗದಿದ್ದು ಮತ್ತು ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿಯ ರೈತರ ಕಬ್ಬು ನುರಿಸಲು ತರುವ ದೃಷ್ಠಿಯಿಂದ ಬೇಕಾಗುವ ಕಬ್ಬು ಕಟಾವು ಯಂತ್ರಣಗಳ ಕರಾರು ಮಾಡಲಾಗಿದೆ ಆದ್ದರಿಂದ ರೈತರು ತಾವು ಬೆಳೆದ ಎಲ್ಲ ಕಬ್ಬನ್ನು ಶ್ರೀ ದತ್ತ ಇಂಡಿಯಾ ಕಂಪನಿಯ ಕಾರ್ಖಾನೆಗೆ ನುರಿಸಲು ಕಳುಹಿಸುವಂತೆ ಆಹ್ವಾನ ಮಾಡಿದರು.
ಅದರಂತೆ ಕಬ್ಬು ಬೆಳೆಗಾರರ ಕಬ್ಬಿನ ಬಿಲ್, ಕಟಾವು ಸಾಗಾಣಿಕೆದಾರ ಬಿಲ್ ನಿಯಮದ ಪ್ರಕಾರ ಸರಿಯಾದ ವೇಳೆಗೆ ಮಾಡಲಾಗುವದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಂಪನಿಯ ಆಡಳಿತ ಅಧಿಕಾರಿ ರವೀಂದ್ರ ಗಾಯಕ್ವಾಡ, ಜನರಲ್ ಮ್ಯಾನೇಜರ (ಟೆಕ್ನಿಕಲ್) ಜಿತೇಂದ್ರ ಮೆಟಕರಿ, ಜನರಲ್ ಮ್ಯಾನೇಜರ (ಉತ್ಪಾದನೆ) ಶ್ರೀಕಾಂತ ಕುಂಭಾರ, ಜನರಲ್ ಮ್ಯಾನೇಜರ (ಕಬ್ಬು) ಅನಿರುದ್ಧ ಪಾಟೀಲ, ರವೀಂದ್ರ ಬಿರಾಜದಾರ, ವಿಜಯಕುಮಾರ ಹತ್ತೂರೆ, ಸುದರ್ಶನ ಕವಜಲಗಿ, ಸಂಗ್ರಾಮ್ ಸೂರ್ಯವಂಶಿ, ಧನಂಜಯ ಪಾಟೀಲ, ಸಚೀನ ನಿಕ್ಕಮ್, ಪ್ರವೀಣ ಜಾಧವ, ವಿನಾಯಕ ಪೂಜಾರಿ, ಮಹಮ್ಮದಹನಿಫ ನದಾಫ ಹಾಗೂ ಇತರೆ ಎಲ್ಲ ಸಿಬ್ಬಂದಿ ಮತ್ತು ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.
ವರದಿ : ಉಮಾಶಂಕರ ಕ್ಷತ್ರಿ




