————————————–ಗ್ಯಾಸ್ ಸಿಲಿಂಡರ್ ಆಕಸ್ಮಿಕ ಬೆಂಕಿ
ಸೇಡಂ: ತಾಲ್ಲೂಕಿನ ಚೋಟಿ ಗಿರಣಿ ನಿವಾಸಿಯಾದ ನಾಗೇಶ್ ತಂದೆ ಮರೆಪ್ಪ ಕೊಳ್ಳಿ ಇವರ ಮನೆಯಲ್ಲಿ ಅಡುಗೆ ಅನಿಲ ಮುಖಾಂತರ ಬೆಂಕಿ ತಾಕಿದ್ದು. ತಕ್ಷಣವೇ ತಾಲೂಕಿನ ಅಗ್ನಿ ಶಾಮಕದಳ ಆಗಮಿಸಿ ಸುರಕ್ಷ ಕೈಗೊಂಡರು, ಹಾಗೂ ಪೊಲೀಸ್ ಸಿಬ್ಬಂದಿ, ಗ್ಯಾಸ್ ಸಿಲಿಂಡರ್ ಅಂಗಡಿ ಮಾಲೀಕರು, ಏಜನ್ಸಿ ಅವರು ಸಹ ಸ್ಥಳಕ್ಕೆ ಬೇಟಿ ನೀಡಿದರು.
ಬೆಂಕಿಗೆ ಆಹುತಿಯಾದ ಮನೆಯಲ್ಲಿ ಅಪಾರವಾದ ದವಸ ಧಾನ್ಯಗಳು, ಟಿವಿ, ಎಲ್,ಐ,ಸಿ ಬಾಂಡ್ ದಾಖಲಾತಿಗಳು, ಬ್ಯಾಂಕ್ ಡಿಪಾಜಿಟ್ ದಾಖಲಾತಿಗಳು ಸುಟ್ಟು ಹೋಗಿವೆ ಎಂದು ಮಾಹಿತಿ ತಿಳಿದಿದೆ, ಹಾಗೆ ಒಂದು ತೊಲಿ ಬಂಗಾರ, 20 ಸಾವಿರ ರೂಪಾಯಗಳು ಕೂಡ ಸುಟ್ಟು ಕಾರಕಲುಲಾಗಿವೆ ಎಂದು ತಿಳಿದಿದೆ. ಈ ಕುರಿತು ಪ್ರಕರಣ ಸೇಡಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




