ಚಿಟಗುಪ್ಪ: ಪಿಕೆಪಿಎಸ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿ ಒಬ್ಬರು ಎತ್ತಿನ ಬಂಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಸನ್ನಿವೇಶ ಶುಕ್ರವಾರ ಜರುಗಿದೆ.
ಚಿಟಗುಪ್ಪಾ ತಾಲೂಕಿನ ತಾಳಮಡಗಿ ಪಿಕೆಪಿಎಸ್ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ದಯಾನಂದ ಶಿವರಾಯ ಅವರು ಎತ್ತಿನ ಬಂಡಿಯಲ್ಲಿ ನಿಂತು ಕೈ ಬಿಸುತ್ತಾ ಗ್ರಾಮದ ಪ್ರಮುಖ ಬಿದಿಗಳಲ್ಲಿ ಪಟಾಕಿ ಸಿಡಿಸಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಿಕೆಪಿಎಸ್ ಕಾರ್ಯಾಲಯಕ್ಕೆ ಬಂದು ದಯಾನಂದ ಸಾಮಾನ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.
ಇದನ್ನ ನೋಡಿದ ಜನರು ವಿಶಿಷ್ಟ ರೀತಿಯಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ.ಇಂತಹ ಮೆರವಣಿಗೆ ಕಾಣೋದು ತುಂಬಾ ವಿರಳ ಎಂದು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿರುವುದು ತೇಲಿ ಬಂದಿದೆ