ಪಾವಗಡ : ತಾಲ್ಲೂಕಿನ ನಿಡಿಗಲ್ ಹೋಬಳಿಯ ಮಂಗಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಅಧ್ಯಕ್ಷರಾಗಿ ದಯಾನಂದ ಎಚ್ ಆಯ್ಕೆಯಾಗಿದ್ದಾರೆ .

ಮಂಗಳವಾಡ ಗ್ರಾ ಪಂ ಮಾಜಿ ಅಧ್ಯಕ್ಷೆ ಮಧು ಬಿ ಎಂ ರಾಜೀನಾಮೆಯಿಂದ ತೆರವಾಗಿದ್ದ ಅದ್ಯಕ್ಷರ ಸ್ಥಾನಕ್ಕೆ ಚುನಾವಣೆ ದಿನಾಂಕ.11/2/25 ಮಂಗಳವಾರ ನಡೆದು ದಯಾನಂದ ಎಚ್ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಶೀಲ್ದರ್ ವರದರಾಜು ತಿಳಿಸಿದ್ದಾರೆ. ಮಂಗಳವಾಡ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರಿದ್ದು. ಪೈಕಿ 16 ಜನ ಹಾಜರಿದ್ದರು ಆಯ್ಕೆ ಮಾಡಲಾಗಿದೆ.
ಈ ವೇಳೆ ಮಾಜಿ ಅಧ್ಯಕ್ಷ ಮಧು ಬಿ ಎಂ , ಉಪಾಧ್ಯಕ್ಷೆ ಅನಿತಮ್ಮ ಸ್ವರಣ್ಣ , ಸದಸ್ಯರುಗಳಾದ ಸಣ್ಣ ತಿಮ್ಮಯ್ಯ,ಆನಂದ್ ಬಿ , ವಡ್ಡಗೇರಮ್ಮ, ಅಂಜಲಿ, ರಾಮಾಂಜಿನಪ್ಪ,ಬಲರಾಮ, ಉಷಾ, ಕೆ ಎಚ್ ಪ್ರೇಮಾ, ಶಿವಮ್ಮ ಲಕ್ಷ್ಮಮ್ಮ,ರತ್ನಮ್ಮ,ಗೋವಿಂದರಾಜು, ರಂಗಸ್ವಾಮಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಗಂಗಾಧರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಶಿವಾನಂದ ಪಾವಗಡ




