ಅಮರಾಪುರ:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗಲೂ ಸಹ ದುರ್ಬಲರಿಗೆ, ಅಸಮರ್ಥರಿಗೆ ಸರ್ಕಾರಿ ಸೌಲಭ್ಯ ಮರೀಚಿಕೆ ಎಂಬುದಕ್ಕೆ ಈ ಕಣ್ಣೀರಿನ ಕಥೆಯೇ ಸಾಕ್ಷಿ..!
ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರಾಪುರ ಗ್ರಾಮದಲ್ಲಿನ 8 ವರ್ಷಗಳಿಂದ ತುಂಬಾನೇ ಶಿಥಿಲಗೊಂಡು ಪ್ರಸ್ತುತ ಮನೆಯೂ ಸಂಪೂರ್ಣವಾಗಿ ಹಾಳಾಗಿದ್ದರೂ ಅದರಲ್ಲೇ ಜೀವದ ಹಂಗಲ್ಲೇ ಬದುಕಿತ್ತಿರುವ 64 ವರ್ಷದ ವೃದ್ಧ ಮಹಿಳೆ ಸುಮಿತ್ರಾ ಪಾಟೀಲ್ ಅವರ ಕಣ್ಣೀರಿನ ಕಥೆ.
ಇವರ ಪತಿ ತೀರಿಕೊಂಡು ತುಂಬಾ ವರ್ಷಗಳೇ ಕಳೆದರೂ ಇಲ್ಲೇ ಒಬ್ಬಂಟಿಯಾಗಿ 30 ವರ್ಷಗಳಿಂದ ಕೂಲಿನಾಲಿ ಮಾಡಿ ಬದುತ್ತಿರುವ ಸುಮಿತ್ರಾ ಪಾಟೀಲ್ ಅವರಿಗೆ ಇಲ್ಲಿಯವರೆಗೂ ಸಹ ಮನೆ ಭಾಗ್ಯವೂ ಸಿಕ್ಕಿಲ್ಲಾ, ಕನಿಷ್ಠ ಪರಿಹಾರವೂ ದೊರಕದೇ ಇರುವುದು ತುಂಬಾ ವಿಪರ್ಯಾಸ. ಇನ್ನೂ ಮನೆ ಸೌಲಭ್ಯ ದೊರಕಿಸುವಂತೆ ಪದೇ ಪದೇ ಅಧಿಕಾರಿಗಳ ಬಳಿ ಮನವಿ ಪತ್ರ ಹೋದರೂ ಕೈ ಬಂದ ತುತ್ತು ಬಾಯಿಗೆ ಬರಲೇ ಇಲ್ಲಾ.
ಇದರಿಂದ ಬೇಸತ್ತು ಯಾರಿಗೂ ತನ್ನ ನೋವು ಹೇಳಲಾಗದೇ ನೋವಿನಲ್ಲೇ ಬದುಕುತ್ತಿರುವ ಈ ವೃದ್ಧ ಮಹಿಳೆಯ ಬದುಕುತ್ತಿರುವ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿ ಕೊಟ್ಟು ಇವರ ಮನೆಗೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ಜಿಲ್ಲಾಧಿಕಾರಿ ಮಹಮದ್ ರೋಷನ್ ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಬಡ ವೃದ್ಧೆಗೆ ಮನೆ ಭಾಗ್ಯ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.