Ad imageAd image

ಆರ್. ಎಚ್. ನಂ 2 ರಲ್ಲಿ ಗ್ರಾಮೀಣ ದಸರಾ ಉತ್ಸವಕ್ಕೆ : ಡಿಸಿ. ನಿತೀಶ್ ಕೆ. ಚಾಲನೆ

Bharath Vaibhav
ಆರ್. ಎಚ್. ನಂ 2 ರಲ್ಲಿ ಗ್ರಾಮೀಣ ದಸರಾ ಉತ್ಸವಕ್ಕೆ : ಡಿಸಿ. ನಿತೀಶ್ ಕೆ. ಚಾಲನೆ
WhatsApp Group Join Now
Telegram Group Join Now

ಸಿಂಧನೂರು : ಸೆ.25 ನಮ್ಮ ಸಿಂಧನೂರು ದಸರಾ ಉತ್ಸವಕ್ಕೆ ನಾಲ್ಕನೇ ದಿನ ಆರ್. ಎಚ್.ನಂ2 ಕ್ಯಾಂಪಿನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ಚಾಲನೆ ನೀಡಿದರು.

1971ರಲ್ಲಿ ಬೆಂಗಾಲಿಯಿಂದ ರಾಯಚೂರು ಜಿಲ್ಲೆ , ಸಿಂಧನೂರು ತಾಲೂಕಿಗೆ ವಲಸಿ ಬಂದು ಜವಳಗೇರಾ ಹತ್ತಿರ ವಾಸ ಮಾಡುತ್ತಿರುವ ಬಂಗಾಳಿ ಸಮುದಾಯದ ಜನರ ಕ್ಯಾಂಪಿನಲ್ಲಿ ಸೆಪ್ಟಂಬರ್ 25ರಂದು ಸಂಜೆ ಅದ್ದೂರಿಯಾಗಿ ನಡೆದ ಗ್ರಾಮೀಣ ದಸರಾ ಉತ್ಸಾಹವು ಇಳಿ ಹೊತ್ತಿಗೆ ಆರಂಭಗೊಂಡು ಗ್ರಾಮೀಣ ದಸರ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.

ಈ ದಸರಾ ಉತ್ಸವದ ರೂವಾರಿ ಸಿಂಧನೂರ್ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಆರ್. ಎಚ್. ಕ್ಯಾಂಪಿನಲ್ಲಿ 40 ವರ್ಷಗಳಿಂದ ನವರಾತ್ರಿ ಕಾರ್ಯಕ್ರಮವನ್ನು ನಾನು ನೋಡುತ್ತಾ ಬಂದಿದ್ದೇನೆ ಈ ಕ್ಯಾಂಪಿನ ಧಾರ್ಮಿಕ ಕಾರ್ಯಕ್ಕೆ ನನಗೆ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೊ. ತಾಸಿಲ್ದಾರ್ ಅರುಣ್ ಎಚ್. ದೇಸಾಯಿ. ತಾಲೂಕು ಪಂಚಾಯಿತಿ ಇ ಓ ಚಂದ್ರಶೇಖರ. ವಿಶೇಷ ರೈಲ್ವೇ ಭೂಸ್ವಾದಿನಾಧಿಕಾರಿ ಶೃತಿ ಕೆ. ಡಿವೈಎಸ್ಪಿ ಬಿಎಸ್. ತಳವಾರ್. ಎಸ್. ದೇವೇಂದ್ರ ಗೌಡ. ಆರ್ ಎಚ್. 1 ರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೆಹಮತ್ ಪಾಷಾ. ಪಂಪನಗೌಡ ಬಾದರ್ಲಿ. ಶ್ರೀದೇವಿ ಶ್ರೀನಿವಾಸ್. ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಮತ್ತು ಸುತ್ತಮುತ್ತಲಿನ ಕ್ಯಾಂಪಿನ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!