Ad imageAd image

ಹಿಡಿದು, ಬಡಿದು ತಿಮಿಂಗಿಲವನ್ನು ಅವರೇ ನುಂಗಿಕೊಳ್ಳಲಿ : ಕುಮಾರಸ್ವಾಮಿಗೆ ಡಿಸಿಎಂ ತಿರುಗೇಟು

Bharath Vaibhav
ಹಿಡಿದು, ಬಡಿದು ತಿಮಿಂಗಿಲವನ್ನು ಅವರೇ ನುಂಗಿಕೊಳ್ಳಲಿ : ಕುಮಾರಸ್ವಾಮಿಗೆ ಡಿಸಿಎಂ ತಿರುಗೇಟು
DKS
WhatsApp Group Join Now
Telegram Group Join Now

ಬೆಂಗಳೂರು: ಪೆನ್ ಡ್ರೈವ್ ಬಿಡುಗಡೆ ಹಿಂದೆ ದೊಡ್ಡ ತಿಮಿಂಗಿಲವಿದೆ. ಅದು ಸರ್ಕಾರದಲ್ಲಿಯೇ ಇದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಪೆನ್ ಡ್ರೈವ್ ಹಿಂದೆ ಯಾರ್ಯಾರು ಇದ್ದಾರೆ ಅವರನ್ನು ಕುಮಾರಣ್ಣ ಹಿಡಿದು ಒಳಗೆ ಹಾಕಲಿ.ಅವರಿಗೆ ಯಾರನ್ನು ಹಿಡಿಯಬೇಕು ಅನ್ನಿಸುತ್ತೋ ಅವರನ್ನು ಹಿಡಿದು, ಬಡಿದು ತಿಮಿಂಗಿಲವನ್ನು ಅವರೇ ನುಂಗಿಕೊಳ್ಳಲಿ ಎಂದು ಹೇಳಿದ್ದಾರೆ.

ಕುಮಾರಣ್ಣ ಹೇಳಿದ ಹಾಗೆ ನಾನು ಯಾವ ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ಕುಮಾರಸ್ವಾಮಿ ಆರೋಪಗಳಿಗೆ ಸಮಯವೇ ಉತ್ತರ ಕೊಡುತ್ತದೆ ಎಂದರು.

ಬೇರೆಯವರಿಂದ ಮಾತನಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ರಾಜಕೀಯ ಪಕ್ಷದ ಅಧ್ಯಕ್ಷ. ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದೇನೆ. ಈ ಪ್ರಕರಣದಲ್ಲಿ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ ಎಂದರು.

ಹೆಚ್.ಡಿ.ರೇವಣ್ಣ ಅವರ ಪರಿಸ್ಥಿತಿ ನೋಡಿ ನನಗೂ ಬೇಸರವಾಗುತ್ತಿದೆ. ಅವರದು ದೊಡ್ಡ ಕುಟುಂಬ, ಈ ರೀತಿ ಆಗಬಾರದಿತ್ತು.

ನಾನು ಹಿಂದೆ ರಾಜಕೀಯ ಷಡ್ಯಂತ್ರಕ್ಕೆ ಗುರಿ ಆಗಿದ್ದವನೇ. ಆ ನೋವು ಏನೆಂಬುದು ಅನುಭವಿಸಿದ್ದೇನೆ. ಆ ವೇಳೆಯಲ್ಲಿ ನಾನು ಎಷ್ಟು ಗಟ್ಟಿಯಾಗಿ, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಇದ್ದೆ ಎಂಬುದು ನನಗೆ ಮಾತ್ರ ಗೊತ್ತಿದೆ. ನಾನು ಬೇರೆಯವರಿಗೆ ಕೆಟ್ತದ್ದನ್ನು ಬಯಸಲ್ಲ.

ಹಾಗಾಗಿ ದೇವರು ನನಗೆ ಎಲ್ಲಾ ರೀತಿಯ ರಕ್ಷಣೆ ನೀಡಿದ್ದಾನೆ. ನಾನು ಪ್ರಕೃತಿ ನಿಯಮ, ನ್ಯಾಯದ ಮೇಲೆ ನಂಬಿಕೆ ಇಟ್ಟವನು ಎಂದರು.ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳಿಗೆ ವಿಧಾನಸಭೆಯಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!