Ad imageAd image

ನೂನ್ಯತೆ ಅರಿತು, ಸತತ ಪ್ರಯತ್ನದಿಂದ ಗುರಿ ಸಾಧ್ಯ : ಡಿಸಿಪಿ ಜಗದೀಶ ರೋಹನ

Bharath Vaibhav
ನೂನ್ಯತೆ ಅರಿತು, ಸತತ ಪ್ರಯತ್ನದಿಂದ ಗುರಿ ಸಾಧ್ಯ : ಡಿಸಿಪಿ ಜಗದೀಶ ರೋಹನ
WhatsApp Group Join Now
Telegram Group Join Now

ಬೆಳಗಾವಿ : ವಿದ್ಯಾರ್ಥಿಗಳ ಜೀವನದಲ್ಲಿ ಸದೃಢ ಗುರಿ ಹೊಂದುವುದು ತುಂಬಾ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಗುರಿ ತಲುಪಲು ಶ್ರಧ್ದೆ ಹಾಗೂ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ಡಿಸಿಪಿ ಜಗದೀಶ ರೋಹನ ತಿಳಿಸಿದರು.

ಇಲ್ಲಿನ ಬೆನನ್ ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಪಾತ್ರ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ವಿಗೆ ವಿದ್ಯಾರ್ಥಿಗಳು ತಮ್ಮಲಿರುವ ನೂನ್ಯತೆ ಅರಿಯಬೇಕು‌. ಬಳಿಕ ಸತತ ಪ್ರಯತ್ನದಿಂದ ಗುರಿ ತಲುಪಲು ಬೇಕಾದ ಎಲ್ಲ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳು ಗುರಿ ತಲುಪುವರೆಗೂ ಕನಸನ್ನು ಜೀವಂತವಾಗಿರಸಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಕೇವಲ ವಿದ್ಯಾರ್ಥಿಗಳೇ ಆಗಬೇಕಿಲ್ಲ. ಕಲಾ ವಿಭಾಗದ ವಿದ್ಯಾರ್ಥಿಗಳು ಶಿಸ್ತು, ಸಂಯಮದಿಂದ ಓದಿದರೇ ಸಾಧಿಸಬಹುದು ಎಂಬುವುದಕ್ಕೆ ನಾನೇ ಸಾಕ್ಷಿ. ನಾನು ಕೂಡಾ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದೇನೆ. ಆದ್ದರಿಂದ ಕನ್ನಡ ಮಾಧ್ಯಮದ ಕಲಾ ವಿದ್ಯಾರ್ಥಿಗಳು ತಮ್ಮ ಕೀಳರಿಮೆಯ ಮನೋಭಾವನೆ ತೋರೆದು ಅಭ್ಯಸಿಸಬೇಕು ಎಂದು ಡಿಸಿಪಿ ಜಗದೀಶ ರೋಹನ್ ಸಲಹೆ ನೀಡಿದರು‌.

ಬಳಿಕ ಹಣಕಾಸು ಇಲಾಖೆಯ ಜಂಟಿ ಉಪಾಯುಕ್ತ ಶಂಕರಾನಂದ ಬನಶಂಕರಿ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕನ್ನಡ ಭಾಷೆಯ ಜ್ಞಾನ ಅಮೂಲ್ಯವಾಗಿದೆ. ಕನ್ನಡದಲ್ಲಿಯೇ ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಬರೆಯಬಹುದು. ಕನ್ನಡ ಸಾಹಿತ್ಯದ ಮೇಲೆಯೇ ಸಾಕಷ್ಟು ಜನರು ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಪಾಸಾಗಿದ್ದಾರೆ. ವಿದ್ಯಾರ್ಥಿಗಳು ಕನ್ನಡ ಕೇವಲ ಪರೀಕ್ಷೆಯ ಭಾಷೆಯಾಗದೇ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಗುರಿ ತಲುಪಲು ಬಳಸಬಹುದಾಗಿದೆ ಎಂದರು.

ಬಳಿಕ ಮಹಾವಿದ್ಯಾಲಯದ ವ್ಯವಸ್ಥಾಪಕ ಮತ್ತು ಸಂಸ್ಥೆಯ ಸಂಯೋಜಕ ವಿಜಯ ಎಲಿಸ್ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಸಾಮ್ಯುಯೆಲ್ ಡೆನಿಲ್ ಮಾತನಾಡಿದರು.

ಈ ವೇಳೆ ಕನ್ನಡ ವಿಭಾಗದ ಅಧ್ಯಕ್ಷ ನಾನಾಸಾಹೇಬ ಜಾಧವ, ಡಿ.ಎನ್.ಬೆಳವಡಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!