ಲಾಡ್ಸ್ ( ಲಂಡನ್): ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡದ 387 ರನ್ ಗಳಿಗೆ ಉತ್ತರವಾಗಿ ಭಾರತ 2 ನೇ ದಿನದಾಟ ಮುಗಿದಾಗ 3 ವಿಕೆಟ್ ಗೆ 145 ರನ್ ಗಳಿಸಿದ್ದು, 242 ರನ್ ಗಳ ಹಿನ್ನಡೆ ಅನುಭವಿಸುತ್ತಿದೆ.
ದಿನದಾಟ ಮುಗಿದಾಗ ಕೆ.ಎಲ್. ರಾಹುಲ್ 53 ರನ್ ಗಳಿಸಿ ಹಾಗೂ ರಿಷಬ್ ಪಂತ್ 19 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಯಶಸ್ವಿ ಜೈಸ್ವಾಲ್ 13 ಹಾಗೂ ಕರುಣ್ ನಯ್ಯರ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಕ್ಕೆ ಮುನ್ನ ಇಂಗ್ಲೆಂಡ್ 387 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಜೂ ರೂಟ್ 104 ರನ್ ಗಳ ಶತಕ ಸಿಡಿಸಿದರು. ಜೆಮ್ಮಿ ಸ್ಮಿತ್ 51 ಹಾಗೂ ಬ್ರೆಡನ್ ಕಾರ್ಸ್ 56 ರನ್ ಗಳಿಸಿದರು. ಜಸ್ಪ್ರೀತ್ ಬೂಮ್ರಾ 74 ಕ್ಕೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.