ಕಲಬುರಗಿ: ನೈತಿಕ ಪೊಲೀಸ್ ಗಿರಿ ರಾಜ್ಯದಲ್ಲಿ ಬಹಳ ಹೆಚ್ಚಾಗುತ್ತಿದೆ. ಅನೇಕ ಪ್ರಕರಣಗಳೂ ಸಹ ವರದಿಯಾಗುತ್ತಿದೆ.
ಅದೇ ರೀತಿಯ ಒಂದು ಪ್ರಕರಣ ಕಲಬುರಗಿಯಲ್ಲಿ ನಡೆದಿದ್ದು, ಅನ್ಯಕೋಮಿನ ಯುವತಿಯೊಬ್ಬಳು ಆಟೋ ಸಿಗುತ್ತಿಲ್ಲ ಎಂದು ಬೈಕ್‌ನಲ್ಲಿ ಡ್ರಾಪ್ ಕೇಳಿದ್ದಾಳೆ.ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವಾಗ ಗಲಾಟೆ ನಡೆದಿದೆ.
ಸಹಾಯ ಕೇಳಿದ ಯುವತಿಗೆ ಯುವಕ ಡ್ರಾಫ್ ಕೊಡಲು ಹೋಗುವಾಗ ಅನ್ಯಕೋಮಿನ ಗುಂಪೊಂದು ಬೈಕ್ ತಡೆದಿದೆ. ನಂತರ ಯುವಕನ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಯುವಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕಲಬುರಗಿ ನಗರದ ಸಂತ್ರಾಸ್‌ವಾಡಿ ಬಳಿ ಘಟನೆ ನಡೆದಿದ್ದು, ಬೈಲಪ್ಪ (21) ಹಲ್ಲೆಗೊಳಗಾದ ಯುವಕನಾಗಿದ್ದು, ಜೂನ್ 25ರ ಮಧ್ಯಾಹ್ನ 2 ಗಂಟೆಗೆ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.




