ಬೆಳಗಾವಿ : ಕೋರ್ಟ್ ಆವರಣದಲ್ಲಿಯೇ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ನ್ಯಾಯಾಲಯದ ಕೋರ್ಟ್ ಆವರಣದಲ್ಲಿ ವಕೀಲ ಜಹೀರ್ ಎಂಬುವವರ ಮೇಲೆ ಕಲ್ಲು ಹಾಗೂ ರಾಡ್ಗಳಿಂದ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಜಹೀರ್ ಅವರ ತಲೆ, ಕಿವಿ, ಮೂಗು, ಹೊಟ್ಟೆಯ ಭಾಗಕ್ಕೆ ಗಂಭೀರಗಾಯಗಳಾಗಿವೆ.
ಜಮೀನು ವ್ಯಾಜ್ಯ ಕೇಸ್ ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಂತೆಯೇ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳು ವಕೀಲರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




