ಹಾಸನ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, 2 ನೇ ತರಗತಿಯ ಮೂಕ, ಕಿವುಡ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
2 ನೇ ತರಗತಿ ಒದುತ್ತಿದ್ದ ಕಿವುಡ ಮತ್ತು ಮೂಕ ಬಾಲಕಿಯ ಮೇಲೆ ಒಂದು ತಿಂಗಳ ಹಿಂದೆ ಅತ್ಯಾಚಾರ ನಡೆದಿದ್ದು, ಆದರೆ, ಬಾಲಕಿಗೆ ಮಾತು ಬಾರದಿದ್ದರಿಂದ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೋಷಕರಿಗೆ ಹೇಳಲು ಆಗಿಲ್ಲ.
ಆದರೆ ಬಾಲಕಿಯ ನರಳಾಟ ನೋಡಿದ ಪೋಷಕರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ.
ಘಟನೆ ಸಂಬಂದ ಬಾಲಕಿಯ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.