Ad imageAd image

ಯುಗಾದಿಯ ಶುಭದಿನದಂದೇ DEAR ಪೋರ್ಕಿ ಟ್ರೈಲರ್ ಲೋಕಾರ್ಪಣೆ

Bharath Vaibhav
ಯುಗಾದಿಯ ಶುಭದಿನದಂದೇ DEAR ಪೋರ್ಕಿ ಟ್ರೈಲರ್ ಲೋಕಾರ್ಪಣೆ
WhatsApp Group Join Now
Telegram Group Join Now

ಬೆಳಗಾವಿ :ಮಿಸ್ಟರ್ ಜೆಂಟಲ್ ಮೆನ್ ಎಂದೇ ಹೆಸರುವಾಸಿಯಾಗಿರುವ ಕಿರುತೆರೆಯ ಹೊಸ ನಟ ಅಜಿತ್ ರಾವ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘DEAR ಪೋರ್ಕಿ ‘ತೆರೆಗೆ ಸಿದ್ದವಾಗಿದೆ.

ಈಗಾಗಲೇ ಸಿನಿಮಾದ ಟ್ರೈಲರ್ ‘A2 ಮೂವೀಸ್ ಯುಟ್ಯೂಬ್’ ಚಾನೆಲ್ ನಲ್ಲಿ ಯುಗಾದಿಯ ಶುಭದಿನವಾದ ಮಂಗಳವಾರ ಕರುನಾಡಿನಾದ್ಯಂತ ಬಿಡುಗಡೆಯಾಗಿದ್ದು ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.

ಟ್ರೈಲರ್ ನೋಡಿದ ಕೂಡಲೇ ನಮ್ಮ ಮನಸಿನಲ್ಲಿ ಮೂಡುವ ಪ್ರಶ್ನೆ, ಸಿನಿಮಾದಲ್ಲಿ ಹಲವಾರು ವಿಷಯಗಳಿದ್ದು, ಒಂದೊಳ್ಳೆ ಕಂಟೆಂಟ್ ಹಾಗೂ ಕ್ವಾಲಿಟಿ ಕೂಡಾ ಇದೆ ಎನ್ನಿಸುತ್ತಿದೆ.
‘DEAR ಪೊರ್ಕಿ ‘ ಸಿನಿಮಾದ ಹೆಸರೇ ಹೇಳುವ ಹಾಗೆ ಪ್ರೀತಿನೇ ಉಸಿರು ಅಂತಾ ಬದುಕೋ ಈ ಹುಡುಗ ನಮ್ಮನ್ನೆಲ್ಲ ಪ್ರೀತಿಯ ಲೋಕಕ್ಕೆ ಕರೆದೋಯುವ ಈ ಹುಡುಗ ನಮಗೆಲ್ಲ ಪ್ರೀತಿಯ
ಮತ್ತೊಂದು ಪ್ರೇಮಲೋಕವನ್ನೇ ಪರಿಚಯಿಸಲು ಹೊರಟಿದ್ದಾನೆ.
ಹೌದು ಎಲ್ಲ ಹೊಸಬರ ತಂಡವೆ ಸೇರಿಕೊಂಡು ಮಾಡಿರುವ
ಚಿತ್ರವಾಗಿದ್ದು, “ಯಾವುದೇ ದೊಡ್ಡ ಸಿನಿಮಾಗೂ ಪೈಪೋಟಿ ಕೊಡಬಹುದಾದಂತ ಕಿರುಚಿತ್ರವಾಗಿದೆ”.ಈಗಾಗಲೇ ಟ್ರೈಲರ್ ನೋಡಿದ ಎಲ್ಲ ಅಭಿಮಾನಿಗಳಿಂದ ಬಹುಪರಾಕ್ ಪಡೆದುಕೊಳ್ಳುತ್ತಿದೆ. ಸಿನಿಮಾದ ನಾಯಕ ನಟನಾಗಿ ಬೆಳಗಾವಿಯ ಮಿಸ್ಟರ್ ಜಂಟಲ್ ಮೆನ್
‘ಅಜಿತ್ ರಾವ್ ‘ಅವರು ನಟಿಸಿದ್ದು ಹಾಗೂ ಇಬ್ಬರು ಹೀರೋಯಿನ್ ಗಳನ್ನು ಒಳಗೊಂಡ,ಈ ಸಿನಿಮಾವನ್ನು ಕೆಲವು ಚಿತ್ರಗಳಲ್ಲಿ ಕೋ- ಡೈರೆಕ್ಟರ್ ರಾಗಿ ಕೆಲಸ ಮಾಡಿ ಅನುಭವವುಳ್ಳ “ಡೈರೆಕ್ಟರ್ ಕೃಷ್ಣ ಎಸ್ ಆರ್ ” ಅವರು ಈ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರತಿಯೊಂದು ವಿಷಯದ ಮೇಲೆ ತುಂಬಾ ಅಚ್ಚು ಕಟ್ಟಾಗಿ ಕೆಲಸ ಮಾಡಿದ್ದೂ, ಇದರ ಫಲಿತಾಂಶವನ್ನು ನಾವು ಈಗಾಗಲೇ ರಿಲೀಸ್ ಆಗಿರುವ ಟ್ರೈಲರನಲ್ಲಿ ನೋಡಬಹುದಾಗಿದೆ.
ಹಾಗೆ ಈ ಕಿರುಚಿತ್ರದಲ್ಲಿ ಮನಸಿಗೆ ಮುದ ನೀಡುವ ಒಂದೊಳ್ಳೆ ಸಂಗೀತ ಸಯೋಜನೆ ಇದ್ದಹಾಗಿದೆ.
ಹಾಗೆಯೇ ಮಾಸ್ ಆಡಿಯನ್ಸ್ ಗಳಿಗೆ ಬೇಕಾದ
ಆಕ್ಷನ್ ಸಿಕ್ವೆನ್ಸಗಳು ಹಾಗೂ ಪೈಟಿಂಗ್ ಸನ್ನಿವೇಶಗಳು ಕೂಡಾ ಇದ್ದು, ಅವುಗಳು ಕೂಡಾ ತುಂಬಾ ಚೆನ್ನಾಗಿ ಮೂಡಿಬಂದಿವೆ.
ಹಾಗೆಯೇ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರ ಅಭಿನಯವು ನೆನಪಿನಲ್ಲಿ ಉಳಿಯುವಂತೆ ಮೂಡಿಬಂದಿದೆ. ಇಷ್ಟೆಲ್ಲಾ ಇರುವ ನಮ್ಮ ಕನ್ನಡ ಸಿನಿಮಾವನ್ನು
ಪ್ರೋತ್ಸಾಹಿಸಿ, ಹರಿಸಿ, ಹಾರೈಸಿ ಬೆಳೆಸಿ.
ಈ ಕಿರುಚಿತ್ರವನ್ನು ಪ್ರತಿಯೊಬ್ಬರೂ ನೋಡುವುದರ ಮೂಲಕ ಪ್ರೋತ್ಸಾಹಿಸಿ, ಹಾಗೆಯೇ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲ ಹೊಸ ಕಲಾವಿದರನ್ನು ಬೆನ್ನ ತಟ್ಟಿ ಪ್ರೋತ್ಸಾಹಿಸಿ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!