Ad imageAd image

ಈಜಲು ಹಳ್ಳಕ್ಕೆ ಇಳಿದಿದ್ದ ಬಾಲಕ ಸಾವು 

Bharath Vaibhav
ಈಜಲು ಹಳ್ಳಕ್ಕೆ ಇಳಿದಿದ್ದ ಬಾಲಕ ಸಾವು 
DEATH
WhatsApp Group Join Now
Telegram Group Join Now

ಬೆಳಗಾವಿ: ಈಜಲು ಹಳ್ಳಕ್ಕೆ ಇಳಿದಿದ್ದ ಬಾಲಕನೊಬ್ಬ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.

ಸವದತ್ತಿ ಪಟ್ಟಣದ ಹೊರವಲಯದಲ್ಲಿರುವ ಸಿದ್ಧನಕೊಳ್ಳದಲ್ಲಿ ಈ ದುರಂತ ಸಂಭವಿಸಿದೆ. ಸಮರ್ಥ ಗಣೇಶ ಸಾವದಿಗಿ (14) ಮೃತ ಬಾಲಕ.ಹುಬ್ಬಳ್ಳಿಯ ಶಿವಶಂಕರ ಕಾಲೋನಿಯ ನಿವಾಸಿ. ಸವದತ್ತಿ ಪಟ್ಟಣಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರ ತೆಗೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!