Ad imageAd image
- Advertisement -  - Advertisement -  - Advertisement - 

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್‌ಐ ಸಾವು

Bharath Vaibhav
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್‌ಐ ಸಾವು
WhatsApp Group Join Now
Telegram Group Join Now

ಕೋಲಾರ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್‌ಐ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ ನಡೆದಿದೆ.

ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ಪಿಎಸ್‌ಐ ಗಾಯತ್ರಿ (51) ಮೃತರು. ಕಳೆದ 30 ವರ್ಷಗಳಿಂದ ಗಾಯತ್ರಿ ಕೆಜಿಎಫ್ ವಿಭಾಗದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗಾಯತ್ರಿ ಕೊನೆಯುಸಿರೆಳೆದಿದ್ದಾರೆ. ಪಿಎಸ್‌ಐ ಗಾಯತ್ರಿ ಸಾವಿಗೆ ಕೆಜಿ ಎಫ್ ಎಸ್ ಪಿ ಶಾಂತರಾಜು, ಡಿವೈ ಎಸ್ ಪಿ ಪಾಂಡುರಂಗ ಸೇರಿದಂತೆ ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!