Ad imageAd image

ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿನಿ ಸಾವು 

Bharath Vaibhav
WhatsApp Group Join Now
Telegram Group Join Now

ವಿಜಯಪುರ : ಮುರುಡೇಶ್ವರ ಬೀಚ್ ನಲ್ಲಿ ಕೆಲವೇ ದಿನಗಳ ಮುಂಚೆ ಶೈಕ್ಷಣಿಕ ಪ್ರಸಾವಕ್ಕೆಂದು ಬಂದಿದ್ದ ವಿದ್ಯಾರ್ಥಿಗಳ ಪೈಕಿ ಸಮುದ್ರದಲ್ಲಿ ಮುಳುಗಿ ವಸತಿ ನಿಲಯದ ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.

ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ಸರ್ಕಾರಿ ಶಾಲೆಯ ಸುಮಾರು 110 ಮಕ್ಕಳನ್ನು ಡಿಸೆಂಬರ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು.

ಈ ಶೈಕ್ಷಣಿಕ ಪ್ರವಾಸ ಮುಗಿಸಿದ ಬಳಿಕ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದ ಕಾರಣ ಆರೋಗ್ಯ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ.

15 ವರ್ಷದ ವಿದ್ಯಾರ್ಥಿನಿ ಶಂಕ್ರಮ್ಮ ಮಲ್ಲನಗೌಡ ಸಾವಿಗೀಡಾಗಿದ್ದಾಳೆ. ಕೇವಲ ಓರ್ವ ವಿದ್ಯಾರ್ಥಿನಿ ಮಾತ್ರವಲ್ಲದೆ,ಈ ಶೈಕ್ಷಣಿಕ ಪ್ರವಾಸದ ಬಳಿಕ ಅನಾರೋಗ್ಯದಿಂದ 30ಕ್ಕೂ ಹೆಚ್ಚು ಮಕ್ಕಳು ಅನಾರೋಗ್ಯಕ್ಕೀಡಾಗಿದ್ದರು.ಇದಕ್ಕೆ ಶಿಕ್ಷಕರಿಂದ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!