Ad imageAd image

ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವು.! ನಮ್ಮ ಕರ್ನಾಟಕ ಸೇನೆಯಿಂದ ಆಸ್ಪತ್ರೆ ಮುಂದೆ ಧರಣಿ.!

Bharath Vaibhav
ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವು.! ನಮ್ಮ ಕರ್ನಾಟಕ ಸೇನೆಯಿಂದ ಆಸ್ಪತ್ರೆ ಮುಂದೆ ಧರಣಿ.!
WhatsApp Group Join Now
Telegram Group Join Now

ಸಿಂಧನೂರು : -ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ತಾಲೂಕಿನ ಆರ್. ಎಚ್. ಕ್ಯಾಂಪ್ ನಂ. 3ರ ಗರ್ಭಿಣಿ ಮೌಸಂಬಿ ಗಂಡ ಮಹೇಶ್ವರ. ಮಂಡಲ್ ಹೆರಿಗೆ ನಂತರ ಸೋಮವಾರ ಮೃತಪಟ್ಟಿದ್ದು ಇದಕ್ಕೆ ವೈದ್ಯರು ಹಾಗೂ ಸಿಬ್ಬಂದಿಯವರು ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಹೆರಿಗೆ ಸಂದರ್ಭದಲ್ಲಿ ಯಾವ ವೈದ್ಯರು ಮತ್ತು ಸಿಬ್ಬಂದಿಗಳು ಯಾರಾರು ಇದ್ದರು ಈ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರಗಿಸಿ ಅವರನ್ನು ಅಮಾನತ್ತು ಗೊಳ್ಳಿಸುವಂತೆ ಒತ್ತಾಯಿಸಿ ‘ನಮ್ಮ ಕರ್ನಾಟಕ ಸೇನೆ’ ವತಿಯಿಂದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಅನಿರ್ದಿಷ್ಟವಧಿ ಧರಣಿ ಹಮ್ಮಿಕೊಳ್ಳಲಾಯಿತು.

ಬಡವರು ಹಣದ ಕೊರತೆಯಿಂದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ಇಲ್ಲಿನ ಕೆಲವು ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಹಾಜೀರಾಗುತ್ತಿಲ್ಲ ಕೆಲವು ವೈದ್ಯರು ಕರ್ತವ್ಯದ ವೇಳೆ ಖಾಸಗಿ ಕ್ಲಿನಿಕ್ ಗೆ ಹೋಗುತ್ತಾರೆ ಚಿಕಿತ್ಸೆಗಾಗಿ ಬಂದ ರೋಗಿಗಳು ಗಂಟೆಗಟ್ಟಲೆ ಕಾಯ್ದು ಕೊನೆಗೆ ನೋವಿನಿಂದ ಮನೆಗೆ ವಾಪಸ್ ಹೋಗುತ್ತಾರೆ ಇನ್ನು ಗರ್ಭಿಣಿ ಮಹಿಳೆಯರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವರು ಪ್ರಾಣ ಕಳೆದುಕೊಳ್ಳುತ್ತಾರೆ

ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಮೌಸಂಬಿ ಅವರ ಸಾವಿನ ಕುರಿತು 10 ದಿನದೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರಗಿಸಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿ ವಿಳಂಬ ಮಾಡಿದರೆ 11ನೇ ದಿನದಿಂದಲೇ ನಮ್ಮ ಸಂಘಟನೆಯಿಂದ ಪುನಃ ಹೋರಾಟ ಹಮ್ಮಿಕೊಳ್ಳಲಾಗುವುದು

ಎಂದು ಮಾನ್ಯ ಮುಖ್ಯ ವೈದ್ಯಾಧಿಕಾರಿಗಳು (ಸಿಎಂ ಓ ) ಸಿಂಧನೂರು ಇವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ- ಉಮೇಶ್ ಗೌಡ ಅರಳಹಳ್ಳಿ. ರಾಜ್ಯ ಕಾರ್ಯಧ್ಯಕ್ಷರು, ಮಂಜುನಾಥ ಗಾಣಿಗೇರ್. ತಾಲೂಕು ಅಧ್ಯಕ್ಷರು, ಹುಸೇನ್ ಬಾಷಾ. ಜಿಲ್ಲಾ ಸಂಚಾಲಕರು, ಶ್ರೀದೇವಿ. ನಗರ ಘಟಕ ಕಾರ್ಯದರ್ಶಿ, ರಾಘವೇಂದ್ರ ಜಿಲ್ಲಾ ಉಪಾಧ್ಯಕ್ಷರು, ಬೂದೇಶ್ ಜಿಲ್ಲಾ ಯುವ ಘಟಕ ಕಾರ್ಯದರ್ಶಿ, ಸಂತೋಷ್ ಕುಮಾರ್ ಹಿರೇಮಠ, ಪ್ರಶಾಂತ್ ಕುಮಾರ್. ಇನ್ನು ಅನೇಕರಿದ್ದರು

ವರದಿ:- ಬಸವರಾಜ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!