ಕೊಪ್ಪಳ: ಬಾಣಂತಿಯರ ಸಾವಿನ ಸರಣಿ ಮುಂದುವರೆದಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಆಡೂರು ಗ್ರಾಮದ ನಿವಾಸಿ ರೇಣುಕಾ ಪ್ರಕಾಶ್ ಮೃತ ಬಾಣಂತಿ. ಹೆರಿಗೆಗಾಗಿ ನಿನ್ನೆ ರಾತ್ರಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ 2:30ರ ಸುಮಾರಿಗೆ ರೇಣುಕಾ ಹೆರಿಗೆಯಾಗಿದ್ದಾರೆ. ಆದರೆ ಹೆರಿಗೆಗೂ ಮುನ್ನವೇ ಶಿಶು ಮೃತಪಟ್ಟಿತ್ತು.
ಸಿಜೆರಿಯನ್ ಮೂಲಕ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ. ಈ ವೇಳೆ ಹೈಬಿಪಿ ಹೆಚ್ಚಾಗಿ ಹಾಗೂ ಹೃದಯಾಘಾತದಿಂದ ಬಾಣಂತಿ ರೇಣುಕಾ ಕೂಡ ಕೊನೆಯುಸಿರೆಳೆದಿದ್ದಾರೆ.