ಚಿಕ್ಕೋಡಿ: 20/4 ರಂದು ನಡೆದಗೊಲ್ಲ, ಯಾದವ,ಹಣಬರ ಸಮಾವೇಶಕ್ಕೆ ಬರುವಾಗ ನಮ್ಮ ಸಮಾಜದ ಕುಲಬಾಂಧವರಾದ ಶ್ರೀ ಸರಜೆರಾವ ಜರಳೆ ಮತ್ತು ಇನ್ನು ಮೂರು ಜನ ಹುಕ್ಕೇರಿ ತಾಲೂಕಿನ ಬೋರಗಲ್ ಕ್ರಾಸ್ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಅಪಘಾತದಲ್ಲಿ ಕಾಲಿಗೆ ಗಾಯ ಆದ ಸುದ್ದಿಯನ್ನು ಕೇಳಿ ಶ್ರೀಮತಿ ಕೆ. ಪೂರ್ಣಿಮಾ ಹಾಗೂ ಡಿ ಟಿ ಶ್ರೀನಿವಾಸ ದಂಪತಿಗಳು ಸಂತಾಪ ಸೂಚಿಸಿ ಜಿಲ್ಲಾಧ್ಯಕ್ಷರಿಂದ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ ಕೂಡಲೆ 50,000 ರೂಪಾಯಿಗಳನ್ನು ಅಪಘಾತದ ಕುಟುಂಬದವರಿಗೆ ಸಹಾಯಾರ್ಥವಾಗಿ ನೀಡುವುದಾಗಿ ತಿಳಿಸಿದರು.
ಶ್ರೀ ಗುರುದತ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕುಗನೊಳಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಚಿನ್ ಖೋತ್ ಅವರು ಕೂಡ 25000 ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಕೋಲಾಪುರಕ್ಕೆ ತೆರಳಿ ಗಾಯಾಳು ಕುಟುಂಬಕ್ಕೆ ಸಾಂತ್ವನ ಹೇಳಿ ಅವರಿಗೆ ಡಿ. ಟಿ. ಶ್ರೀನಿವಾಸ ದಂಪತಿಗಳ ಪರವಾಗಿ ಸಹಾಯ ಧನ ನೀಡಿದರು.ಈ ಸಂದರ್ಭದಲ್ಲಿ ಶ್ರೀ ವಸಂತ ಕರಕಳಿ, ಶ್ರೀ ಸಚಿನ್ ಖೋತ, ಜಿಲ್ಲಾಧ್ಯಕ್ಷರಾದ ಶ್ರೀ.ಶೀತಲ್ ಮುಂಡೆ,ಶ್ರೀ ಮಡಿವಾಳಪ್ಪ ಬಸರಿಗೆ ಶ್ರೀ ಜಗನ್ನಾಥ್ ಖೊತ ಶ್ರೀ ಪ್ರದೀಫ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ