—————ಕೊಲ್ಲಾಪುರದ ಮಹಾಲಕ್ಷ್ಮಿಗೆ 8 ನೇ ದಿನದ ಪೂಜೆ, ಭಕ್ತರ ಜನದಟ್ಟಣೆ

ನಿಪ್ಪಾಣಿ: ಕೊಲ್ಲಾಪುರದ ಮಹಾಲಕ್ಷ್ಮಿಗೆ ಶಾರದೆಯ ನವರಾತ್ರೋತ್ಸವ ಸಂಭ್ರಮದಲ್ಲಿಯ 8.ನೇ ದಿನ ಮಂಗಳವಾರ ಸಂಜೆ ಮಹಾಲಕ್ಷ್ಮಿಗೆ ಮಹಿಷಾಸುರ ಮರ್ಧಿನಿ ರೂಪದಲ್ಲಿ ಅಲಂಕಾರ ಪೂಜೆ ನಡೆಯಿತು. ದಿನಾಂಕ 30.ರಂದು ಬೆಳಿಗ್ಗೆಯಿಂದಲೇ ವಿವಿಧ ರಾಜ್ಯಗಳಿಂದ ಭಕ್ತರ ದಂಡು ಆಗಮಿಸುತ್ತಿತ್ತು.

ಮಂದಿರದಲ್ಲಿ ಜನದಟ್ಟನೆ ನಿಯಂತ್ರಣಕ್ಕಾಗಿ ದೇವಸ್ಥಾನ ಸಮಿತಿಯ ಸೇವಕರು, ಪೊಲೀಸರು, ಶ್ರಮವಹಿಸಿದ್ದರು. ಮಂದಿರ ಪರಿಸರ ಸ್ವಚ್ಛತೆಯ ಜೊತೆಗೆ ಭಕ್ತರಿಗೆ ಸಕಾಲಕ್ಕೆ ದೇವಿಯ ದರ್ಶನ ಅನುಕೂಲಕ್ಕಾಗಿ ಸರದಿಯಲ್ಲಿಯೇ ಶಿಸ್ತು ಬದ್ಧವಾಗಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಮಂಗಳವಾರ ಮಹಿಷಾಸುರ ಮರ್ಧಿನಿ ರೂಪದಲ್ಲಿ ಅಲಂಕಾರದ ಮಹಾಲಕ್ಷ್ಮಿಯ ದರ್ಶನಕ್ಕಾಗಿ ವಿವಿಧ ರಾಜ್ಯಗಳಿಂದ 75 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದರು.
ವರದಿ: ಮಹಾವೀರ ಚಿಂಚಣೆ




