Ad imageAd image

ಲೋಣಿ ಬಿಕೆ ಗ್ರಾಮದಲ್ಲಿ ಗ್ರಾಮ ದೇವರಾದ ಶ್ರೀ ಸಿದ್ಧರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ.

Bharath Vaibhav
ಲೋಣಿ ಬಿಕೆ ಗ್ರಾಮದಲ್ಲಿ ಗ್ರಾಮ ದೇವರಾದ ಶ್ರೀ ಸಿದ್ಧರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ.
WhatsApp Group Join Now
Telegram Group Join Now

ಚಡಚಣ :  ಸಮೀಪದ ಲೋಣಿ ಗ್ರಾಮದಲ್ಲಿ ಸಿದ್ದೇಶ್ವರ ಮೂರ್ತಿಯನ್ನು ಜಮಖಂಡಿ ತಾಲೂಕಿನ ಹನಗಂಡಿ ಗ್ರಾಮದಿಂದ ಲೋಣಿ ಬಿ ಕೆ ಗ್ರಾಮದವರೆಗೆ ಶಿವನಿಗೆ ಪ್ರಿಯವಾದ ನಂದಿ ಅಂದರೆ ಎತ್ತಿನ ಗಾಡಿಗಳಲ್ಲಿ ಪದಯಾತ್ರೆಯ ಮೂಲಕ ನೂತನ ಮೂರ್ತಿಗಳನ್ನು ತಂದು ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾವಿರಾರು ಕುಂಭ ಹೊತ್ತ ಸುಮಂಗಲೆಯರು ಮತ್ತು ವಾದ್ಯ ವೈಭವಗಳೊಂದಿಗೆ ಗ್ರಾಮಕ್ಕೆ ಸ್ವಾಗತಿಸಿ.

ದೇವಾಲಯದಲ್ಲಿ ಹೋಮ ಹವನಾದಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದು ದಿನಾಂಕ 3/2/2025 ಸೋಮವಾರದಂದು ಶ್ರೀ ಮದ್ ರಂಭಾಪುರೀ ವೀರ ಸಿಂಹಾಸನಾದಿಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪದರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ನಡೆಯುತ್ತದೆ ಎಂದು ಶ್ರೀ ಸಿದ್ದೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಕಾರ್ಯಾಧ್ಯಕ್ಷರಾದ ಶ್ರೀ ಕೆ ಎಸ್ ಪಾಟೀಲ, ಹಾಗೂ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಸಿದ್ದಾರೆ.

ವರದಿ: ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!