ಬೆಳಗಾವಿ: ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿಯ ಲೋಕಾರ್ಪಣೆ ಹಮ್ಮಿಕೊಂಡಿದ್ದರು. ಕವಲಗುಡ್ಡ ಸಿದ್ದ ಸಂಸ್ಥಾನ ಮಠದ ಸಿದ್ದಯೋಗಿ ಪರಮಪೂಜ್ಯ ಶ್ರೀ ಅಮರೇಶ್ವರ ಮಹಾರಾಜರು ಇವರ ಸಾನಿಧ್ಯದಲ್ಲಿ ಹಾಗೂ ರಾಜಕೀಯ ಮುಖಂಡರಿಂದ ನೆರವೇರಿತು.

ಬಾಲಕೃಷ್ಣಜಂಬಿಗಿ ದಂಪತಿಗಳು ಹಾಗೂ ಪರಿವಾರದವರಿಗೆ ವರಿಗೆವೇದಿಕೆ ಮೇಲೆ ಸನ್ಮಾನ ಮಾಡಲಾಯಿತು. ರಾಯಣ್ಣನ ಕಂಚಿನ ಮೂರ್ತಿ ಇವರಿಂದ ಸಮಾಜಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ. ಪರಮಪೂಜ್ಯ ಮುತ್ತೇಶ್ವರ ಮಹಾರಾಜರು ಮಾತನಾಡಿ ನಮ್ಮ ಭಾರತ ದೇಶ ಆದ್ಯಾತ್ಮಿಕ ದೇಶ. ಸಂಗೊಳ್ಳಿ ರಾಯಣ್ಣ ತಾಯಿ ಕೆಂಚಮ್ಮ ತನ್ನ ಮಗನ ಬಗ್ಗೆ ಅಪಾರ ಗೌರವಿತ್ತು ದೇಶದಲ್ಲಿ ಹುಟ್ಟಿದರೆ ನನ್ನಂತ ಮಗ ಹುಟ್ಟಬೇಕೆಂದು ಹೇಳುತ್ತಿದ್ದಳು. ಎಂದು ಹೇಳಿದರು.
ರಾಹುಲ ಅಣ್ಣಾ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ಮಾತನಾಡಿ. 33ನೇ ವಯಸ್ಸಿನಲ್ಲಿ ರಾಯಣ್ಣ ಸಾಧನೆ. ಹಾಗೂ ಭಗತ್ ಸಿಂಗ್ ಅವರ ಸಾಧನೆ ನಮ್ಮ ಭಾರತ ದೇಶಕ್ಕೆ ಅಜರಾಮರ ಮತ್ತು ನಮ್ಮ ಯುವ ಜನತೆಗೆ ಸ್ಪೂರ್ತಿ ಎಂದು ಹೇಳಿದರು.
ಹಾಗೂ ವೇದಿಕೆಯ ಮೇಲೆ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಹೇಂದ್ರ ತಮ್ಮನವರ. ಮಾಜಿ ಶಾಸಕ ಪಿ. ರಾಜೀವ್ ಹಾಗೂ ಇನ್ನೂ ಅನೇಕ ಗಣ್ಯಮಾನ್ಯರು ರಾಜಕೀಯ ಮುಖಂಡರು. ಪೋಲಿಸ್ ಇಲಾಖೆ ಹಾಗೂ ತಹಶೀಲ್ದಾರ್ರಿಗೆ ಪರಮಪೂಜ್ಯರು ಹಾಗೂ ಪತ್ರಕರ್ತರಿಗೆ ವೇದಿಕೆ ಮೇಲೆ ಸನ್ಮಾನ ಮಾಡಲಾಯಿತು.
ವರದಿ : ಭರತ ಮೂರಗುಂಡೆ




