ನಿಪ್ಪಾಣಿ : ಪ್ರಥಮಾ ಚಾರ್ಯ ಶಾಂತಿ ಸಾಗರ ಮುನಿಗಳ ಜನ್ಮಭೂಮಿ ನಿಪ್ಪಾಣಿ ತಾಲೂಕಿನ ಧರ್ಮನಗರಿ ಭೋಜ ಗ್ರಾಮದಲ್ಲಿ ಪರಮಪೂಜ್ಯ ಜ್ಞಾನ ಯೋಗಿ ಆಚಾರ್ಯ ಶ್ರೀ ವಿದ್ಯಾನಂದಿ ಮುನಿಗಳ 40ನೇ ಚಾತುರ್ಮಾಸ ಪ್ರಯುಕ್ತ ಹಾಗೂ ರವಿವಾರ 27 ಜುಲೈ ದಿನದಂದು ಇಸ್ರೋ ದ ಖ್ಯಾತ ಖಗೋಳ ತಜ್ಞ ರಾಜ್ ಮಲ್ ಜೈನ್ ಅವರಿಂದ ವ್ಯಾಖ್ಯಾನ ನಡೆಯಲಿದೆ ಎಂದು ವಿದ್ಯಾನಂದಿ ಮುನಿಗಳು ತಿಳಿಸಿದರು. ಗ್ರಾಮದ ದಿಗಂಬರ್ ಜೈನ್ ಬಸದಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿಗಳು ವ್ಯಾಖ್ಯಾನದ ಕುರಿತು ಅಧಿಕ ಮಾಹಿತಿ ನೀಡಿದರು.
ಜೈನಧರ್ಮ ಪ್ರಾಚೀನತೆ ಹಾಗೂಸಂಸ್ಕೃತಿ ಕುರಿತು ಮತ್ತು ರವಿವಾರ 27ರಂದು ಅಹಿಂಸೆಯ ಜ್ಞಾನ ಹಾಗೂ ಪರಿಸರ ರಕ್ಷಣೆ ಕುರಿತು ವ್ಯಾಖ್ಯಾನ ನಡೆಯಲಿದ್ದು ಸಮಸ್ತ ದಿಗಂಬರ್ ಜೈನ್ ಸಮಾಜದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮದ ಶಾಂತಿ ಸಾಗರಮ ತೀರ್ಥದಲ್ಲಿ ಸಂಜೆ 7 ಗಂಟೆಯಿಂದ ನಡೆಯಲಿದೆ ಎಂದು ತಿಳಿಸಿ ಸಮಸ್ತ ಜೈನ ಶ್ರಾವಕ, ಶ್ರಾವಕಿಯರು ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸುದ್ದಿಗೋಸ್ಟಿ ಯಲ್ಲಿ ದಿಗಂಬರ್ ಜೈನ ಟ್ರಸ್ಟ್ ಅಧ್ಯಕ್ಷ ರಮಿತ್ ಸದಲಗೆ, ಸಂದೀಪ ಪಾಟೀಲ, ವಿದ್ಯಾಧರ ನೇಜೆ, ರಜನಿಕಾಂತ್ ಚೌಗುಲೆ, ರಾಜೇಂದ್ರ ಉತ್ತೂರೇ, ಶೀತಲ್ ಬಾಗೆ, ಅಪ್ಪಸಾಹೇಬ ಪಾಟೀಲ, ಶೀತಲ ಬಾಬು ಸದಲಗೆ, ರವಿಕೀರ್ತಿ ಪಾಟೀಲ ಶೀತಲ ದೇಸಾಯಿ, ಸಂತೋಷ್ ಮಾನಗಾವೆ, ಅಜಿತ್ ಗೇಬಿಸೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ




