ವಿಶಾಖಪಟ್ಟಣಂ: ಮಧ್ಯಮ ಕ್ರಮಾಂಕದ ಬ್ಯಾಟುಗಾರ ಅಂಕಿತ ವರ್ಮಾ ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ಸನ್ ರೈಸ್ ಹೈದರಾಬಾದ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 163 ರನ್ ಗಳಿಸಿ ಎದುರಾಳಿ ತಂಡಕ್ಕೆ 164 ರನ್ ಗಳ ಗೆಲುವಿನ ಗುರಿ ನೀಡಿತು.
ಇಲ್ಲಿನ ವೈ.ಎಸ್. ರಾಜಶೇಖರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸ್ ಹೈದರಾಬಾದ್ ತಂಡ ನಿಗದಿತ 20 ಓವರುಗಳನ್ನು ಕೂಡ ಪೂರೈಸದೇ 18.4 ಓವರುಗಳಲ್ಲಿ ಆಲೌಟ್ ಆಯಿತು. ತಂಡದ ಪರವಾಗಿ ಅಂಕಿತ ವರ್ಮಾ ಮಾತ್ರ ಎದುರಾಳಿ ತಂಡದ ಬೌಲರುಗಳನ್ನು ದಿಟ್ಟ ತನದಿಂದ ಎದುರಿಸಿದರು. ಅವರು 41 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು.
ಸ್ಕೋರ್ ವಿವರ:
ಸನ್ ರೈಸ್ ಹೈದರಾಬಾದ್ 18.4 ಓವರುಗಳಲ್ಲಿ163
ಅಂಕಿತ ವರ್ಮಾ 74, 41 ಎಸೆತ, 5 ಬೌಂಡರಿ 6 ಸಿಕ್ಸರ್, ಹೆನ್ರಿಚ್ ಕ್ಲಾಸೆನ್ 32, 19 ಎಸೆತ, 2 ಬೌಂಡರಿ, 2 ಸಿಕ್ಸರ್
ಟ್ರೆವರ್ಸ್ ಹೆಡ್ 22, 12 ಎಸೆತ, 4 ಬೌಂಡರಿ.ಮಿಚೆಲ್ ಸ್ಟಾರ್ಕ್ 35 ಕ್ಕೆ 5. ಕುಲದೀಪ್ ಯಾದವ್ 22 ಕ್ಕೆ 3)