Ad imageAd image

ಬೆಂಗಳೂರಿನಲ್ಲಿ ದೆಹಲಿ ಮಾದರಿ ಹತ್ಯೆ : ಯುವತಿ ಕತ್ತರಿಸಿ 30 ತುಂಡು ಮಾಡಿ ಫ್ರಿಜ್ನಲ್ಲಿ ಇಟ್ಟ ರಾಕ್ಷಸ 

Bharath Vaibhav
ಬೆಂಗಳೂರಿನಲ್ಲಿ ದೆಹಲಿ ಮಾದರಿ ಹತ್ಯೆ : ಯುವತಿ ಕತ್ತರಿಸಿ 30 ತುಂಡು ಮಾಡಿ ಫ್ರಿಜ್ನಲ್ಲಿ ಇಟ್ಟ ರಾಕ್ಷಸ 
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಅನ್ಯ ರಾಜ್ಯದ ಯುವತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಇದೀಗ ಸ್ಪೋಟಕ ತಿರುವು ಸಿಕ್ಕಿದ್ದು, ಕೊಲೆ ಮಾಡಿದ ಬಳಿಕ ಹಂತಕ, ಯುವತಿಯ ಮೃತದೇಹವನ್ನು ಸುಮಾರು 30 ಪೀಸ್ ಮಾಡಿ ಫ್ರಿಜ್ನಲ್ಲಿ ಇಟ್ಟಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಕೊಲೆಯಾದಂತ ಯುವತಿಯನ್ನು ಮಹಾಲಕ್ಷ್ಮಿ (26) ಎಂದು ತಿಳಿದುಬಂದಿದೆ.

ಸದ್ಯ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರು ಭೇಟಿ ನೀಡಿದ್ದು, ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇವಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯುವತಿ ಬೇರೆ ರಾಜ್ಯದವರಾಗಿದ್ದು ಕರ್ನಾಟಕದಲ್ಲಿ ಕೆಲಸ ಮಾಡಿಕೊಂಡಿದ್ದು ಹಲವು ವರ್ಷಗಳ ಹಿಂದೆ ಇಲ್ಲಿಯೇ ಸೆಟ್ಲ್ ಆಗಿದ್ದರು.

ಸುಮಾರು 26 ವಯಸ್ಸಿನ ಯುವತಿ ಎಂದು ತಿಳಿದುಬಂದಿದೆ. ಯುವತಿಯನ್ನು ತುಂಡು ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದರು ಹೊರ ರಾಜ್ಯದ ಯುವತಿ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದರು.

ಯುವತಿಯ ಕೊಲೆ ಸುಮಾರು ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ನಡೆದಿದೆ. ಮೊದಲ ಮಹಡಿಯಲ್ಲಿರುವ 1 BHK ಮನೆಯಲ್ಲಿ ಒಂದು ಕೊಲೆ ನಡೆದಿದೆ. 26 ವರ್ಷದ ಯುವತಿಯ ದೇಹವನ್ನು ತುಂಡು ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಕೊಲೆಯಾಗಿರುವ ಮಾಹಿತಿ ಇದೆ. ಸ್ಥಳಕ್ಕೆ ಸೋಕೋ ಟೀಮ್ ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಇನ್ನೂ ಎಫ್ ಎಸ್ ಎಲ್ ಟೀಮ್ ಬರಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾಹಿತಿ ನೀಡಿದರು.

ಯುವತಿಯ ಬರ್ಬರ ಕೊಲೆಯ ವಿಷಯ ತಿಳಿದು ಸ್ಥಳೀಯರು ಶಾಕ್ ಆಗಿದ್ದು, ಆರರಿಂದ ಏಳು ತಿಂಗಳಿಂದ ಮಹಾಲಕ್ಷ್ಮಿ ಈ ಒಂದು ಮನೆಯಲ್ಲಿ ವಾಸ ಮಾಡುತ್ತಿದ್ದಳು. ಮದುವೆಯಾಗಿ ಗಂಡನಿಂದ ಮಹಾಲಕ್ಷ್ಮಿ ದೂರ ಇದ್ದಳು. ಕಳೆದ ಎರಡು ದಿನಗಳಿಂದ ಮನೆಯಿಂದ ವಾಸನೆ ಬರುತ್ತಿತ್ತು.

ಇಂದು ಅಕ್ಕ ಪಕ್ಕದವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಯುವತಿ ಮಹಾಲಕ್ಷ್ಮಿಯ ತಾಯಿ, ಅಕ್ಕ, ಮನೆ ಬಳಿ ಬಂದಿದ್ದರು. ಮನೆಯ ಬೀಗ ಒಡೆದು ಒಳಗೆ ಹೋದಾಗ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಬೀಗ ತೆಗೆದಾಗ ಶವದಿಂದ ಹುಳಗಳು ಹೊರಗಡೆ ಬರುತ್ತಿದ್ದ ನೋಡಿ ಪೊಲೀಸರು ಶಾಕ್ ಆಗಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!