ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿನ ಅಶಕ್ತರಿಗೆ, ವೃದ್ದರಿಗೆ ಎಸ್.ಇ.ಎಸ್. ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಬೆಡ್‌ಶೀಟ್ ವಿತರಣೆ ಮಾಡಲಾಯಿತು.
ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.
ಅದರಲ್ಲಿ ಬಂದ ಲಾಭಾಂಶದ ಹಣದಲ್ಲಿ ಯಾರಿಗಾದರೂ ನೆರವು ನೀಡಬೇಕೆಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿತ್ತು.
ಶಾಲಾ ಆಡಳಿತ ಮಂಡಳಿಯ ಅನುಮತಿ ಪಡೆದು ಚಳಿಗಾಲವಾದ್ದರಿಂದ ದೇವಸ್ಥಾನಗಳ ಮುಂದೆ ವಾಸಿಸುತ್ತಿರುವ ನಿರಾಶ್ರಿತ ವೃದ್ದರಿಗೆ, ಬಿಡಾರದಲ್ಲಿರುವ ಬಡವರಿಗೆ ಹೊದಿಕೆ ವಿತರಣೆ ಮಾಡಲಾಗುತ್ತಿದೆಂದು ದೈಹಿಕ ಶಿಕ್ಷಕರಾದ ವೈ.ಡಿ.ವೆಂಕಟೇಶ ಅವರು ತಿಳಿಸಿದರು.
ಸಮಾಜದಲ್ಲಿನ ಅಶಕ್ತರಿಗೆ ನಮ್ಮಿಂದಾದ ನೆರವು ನೀಡಬೇಕೆಂಬುದು ನಮ್ಮೆಲ್ಲಾ ಸಹಪಾಠಿಗಳ ಆಶಯವಾಗಿತ್ತು. ಅದರಂತೆ ನಗರದ ಹೊರವಲಯದಲ್ಲಿರುವ ಬಿಡಾರಗಳಲ್ಲಿನ ಅಲೆಮಾರಿ ಜನಾಂಗದ ಚಿಕ್ಕ ಮಕ್ಕಳಿಗೆ ಮತ್ತು ಶ್ರೀ ಪ್ಯಾಟೆ ಆಂಜನೇಯ್ಯ ಸ್ವಾಮಿ ದೇವಸ್ಥಾನ ಇನ್ನಿತರ ದೇವಸ್ಥಾನದ ಮುಂದಿರುವ ನಿರಾಶ್ರಿತರಿಗೆ 50ಕ್ಕೂ ಅಧಿಕ ಹೊದಿಕೆಗಳನ್ನು ವಿತರಿಸಲಾಗಿದೆಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಶಾಲಾ ಶಿಕ್ಷಕಿಯರಾದ ಕಾವ್ಯ, ಆಶಾರಾಣಿ, ಸೌಮ್ಯ ಹಾಗೂ ವಿದ್ಯಾರ್ಥಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ




