ಗುರುಮಾಠಕಲ್ : ಗುರುಮಾಠಕಲ್ ಪಟ್ಟಣದಲ್ಲಿ ಬರುವ ಪಟ್ಟಣದ ಶಾಸಕರ ಜನ- ಸಂಪರ್ಕಕಚೇರಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಗುರುಮಾಠಕಲ್ ಶಾಸಕ ಶರಣು ಗೌಡ ಕಂದುಕೂರು ವಿತರಣೆ ಮಾಡಿ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರಕಾರದ ವತಿಯಿಂದ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಲ್ಯಾಪ್ಟಾಪ್ಗಳನ್ನು ವಿತರಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ಮೂಲಕ ಗ್ರಾಮ ಮಟ್ಟದ ಆಡಳಿತ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ
ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲೀಕರಣಕ್ಕೆ ಪೂರಕವಾಗಿದ್ದು ಗ್ರಾಮ ಮಟ್ಟದ ಆಡಳಿತದಲ್ಲಿ ತಾಂತ್ರಿಕ ಸಾಮರ್ಥ್ಯ ಹೆಚ್ಚಿಸಿ ಯಾದಗಿರಿ ಜಿಲ್ಲೆ ಇನ್ನೆರಡು ತಿಂಗಳಿನಲ್ಲಿ ಮೊಟ್ಟ ಮೊದಲ ಸ್ಥಾನದಲ್ಲಿ ಇರಲು ಪ್ರಾಮಾಣಿಕ ಪ್ರಯತ್ನ ಮಾಡಿ ಹಾಗೂ ಹಳ್ಳಿ ಜನ ಅಲೆದಾಟ ತಪ್ಪಿಸಿ ಎಂದು ಎಲ್ಲಾ ಗ್ರಾಮಧೀಕಾರಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರು ತಾಲೂಕ ವಿಕಲಚೇತನರ ಕುಂದು ಕೊರತೆಗಳ ಕುರಿತು ಹಾಗೂ ವಿಕಲ ಚೇತನರ ಹಕ್ಕು ಒತ್ತಾಯದ ಸಮಾವೇಶ ಕುರಿತು RPD ಟಾಸ್ಕ ಸದಸ್ಯರೊಡನೆ ಸಮಾಲೋಚನೆ ಮಾಡಿದರು, ವಿಕಲ ಚೇತನರ ಸಮಸ್ಯೆಗಳಿಗೆ ಶೀಘ್ರವೇ ಪರಿಹರಿಸಲು ತಾಲೂಕ ದಂಡಾಧೀಕಾರಿಗಳಿಗೆ ಸೂಚನೆ ನೀಡಿದರು.
ಈ ಸಂರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುಭಾಸ್ ಕಾಟಕಟಿ. ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ್ ನೀರೇಟಿ. ಜೆಡಿಎಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶರಣು ಅವುಂಟಿ. ಆಶಾನ್ನ ಬುದ್ಧ ಪುರಸಭೆ ಸದ್ಯಸರು ಗ್ರೂಡ್ 2 ತಸೀಲ್ದಾರ್ ನರಸಿಂಹ ಸ್ವಾಮಿ. ಲಾಲಪ್ಪ ತಲಾರಿ ಅನಂತಪ್ಪ ಮುಕ್ಕಿಡಿ.ಇನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ : ರವಿ ಬುರನೋಳ್




