ರಾಮದುರ್ಗ :- ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಗ್ರಹ ಸಚಿವ ಜಿ ಪರಮೇಶ್ವರ ಮತ್ತು ತಾಲೂಕಿನ ದಂಡಾಧಿಕಾರಿಗಳು ರಾಮದುರ್ಗ ಇವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಬೆವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಉದ್ಭವಿಸಿದ ಈ ಘಟನೆ ಸಕಲರನ್ನು ನಡುಗಿಸಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರ ಸಮ್ಮುಖದಲ್ಲಿ, ಸಂತೋಷ ಚುರಮೂಲೆ ಎಂಬುವವರು ಮಾಧ್ಯಮದ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜು ಕಾಗೆ, ಅವರದು ಮಾಧ್ಯಮದವರು ಬೇರೆ ದೃಷ್ಟಿಯಿಂದ ವರದಿ ಮಾಡಿದರೆ, ಅವರ ಮನೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ, ಮಾಧ್ಯಮದ ಪ್ರತಿನಿಧಿಗಳಿಗೆ ದಮ್ಮಿಕ್ಕಿ ಹಾಕಿದ್ದಾರೆ.
ಪತ್ರಿಕಾ ರಂಗ ಇದು ಸಂವಿಧಾನದ ನಾಲ್ಕನೇ ಅಂಗ ಈ ತರ ಇರುವಾಗ ಪತ್ರಕರ್ತರು ಮನೆಯಿಂದ ಹೊರಗಡೆ ಬರಬೇಕಾದರೆ ತಮ್ಮ ಜೀವದ ಮೇಲೆ ಆಸೆಯನ್ನು ತೆಗೆದಇಟ್ಟು ವರದಿಯನ್ನು ಮಾಡಿ ಯಾವಾಗ ಮನೆಗೆ ತಲುಪ್ತಾರೋ ಅನ್ನೋದೇ ಗೊತ್ತು ಇರಲ್ಲಾ, ತಮ್ಮ ಜೀವವನ್ನು ಮುಡುಪಾಗಿಟ್ಟು ಹಗಲು ರಾತ್ರಿ ಎನ್ನದೆ ವರದಿಯನ್ನು ಮಾಡಿ ಸಮಾಜಕೆ ತೋರಿಸುತ್ತಾರೆ ಮತ್ತು ಪತ್ರಕರ್ತರಿಗೆ ಯಾರು ಕೊಡ ಪೇಮೆಂಟ್ ಕೂಡಲ್ಲ ಅಂತವರಿಗೆ ಆಶೆ ಹಾಗೂ ಅಮಿಷಾಗೆ ಆಶೆ ಹುಟಿಸಿಬೇಡಿ ಎಂದರು, ಮತ್ತು ಪತ್ರಕರ್ತರಿಗೆ ನ್ಯಾಯ ಹಾಗೂ ಭದ್ರತೆ ಸಿಗುವವರಿಗೂ ನಾವು ಹೋರಾಟ ಮಾಡುವದು ಬಿಡುವುದಿಲ್ಲ ಎಂದ ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಸ್ ಗೋಡಕೆ ಮಾತನಾಡಿದರು .
ಆದ ಕಾರಣ ಪತ್ರಕರ್ತಗೆ ಭದ್ರತೆ ಹಾಗೂ ಸಂತೋಷ ಚುರಮೂಲೆ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಅಂತಹವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ವೃತ್ತಿ ನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಘಟಕದಿಂದ ತಹಶೀಲ್ದಾರ ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಹ ಸಚಿವ ಜಿ ಪರಮೇಶ್ವರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು .
ವರದಿ:- ಮಂಜುನಾಥ ಕಲಾದಗಿ