Ad imageAd image

ಹಳ್ಳ ಒತ್ತುವರಿ, ದಲಿತ ಸಂಘಟನೆಯ ಮುಖಂಡರಿಂದ ಕ್ರಮಕ್ಕೆ ಆಗ್ರಹ

Bharath Vaibhav
ಹಳ್ಳ ಒತ್ತುವರಿ, ದಲಿತ ಸಂಘಟನೆಯ ಮುಖಂಡರಿಂದ ಕ್ರಮಕ್ಕೆ ಆಗ್ರಹ
WhatsApp Group Join Now
Telegram Group Join Now

ಜಮಖಂಡಿ : ತಾಲೂಕಿನ ಸಾವಳಗಿ ಗ್ರಾಮದ ದೊಡ್ಡ ಹಳ್ಳ ಎಂದೇ ಹೆಸರು ವಾಸಿಯಾದ ಈ ಹಳ್ಳವನ್ನು ಅವರ ಸ್ವಂತ ನಿವೇಶನಗಳಿಗೆ ಹೊಂದಿರುವ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಹಳ್ಳವನ್ನು ಒತ್ತುವರಿ ಮಾಡಿ ಹಳ್ಳದಲ್ಲಿ ಶೇಡ್ ನಿರ್ಮಾಣ ಮಾಡಿ ಭೂ ಕಬಳಿಕೆ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಹೊರವಲಯದಲ್ಲಿ ದಶಕಗಳ ಹಿಂದೆ ಇದ್ದ ವಿಸ್ತಾರವಾದ ಹಳ್ಳ ಇತ್ತೀಚೆಗೆ ಭೂಕಳ್ಳರ ಒತ್ತುವರಿಯಿಂದಾಗಿ ಕಿರಿದಾಗಿದೆ.ಹಳ್ಳವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಪರವಾನಗಿ ನೀಡಿದವರು ಯಾರು? ಪರವಾನಗಿ ಇಲ್ಲದೆ ರಾಜಾರೋಷವಾಗಿ ಹಳ್ಳ ಒತ್ತುವರಿ ಮಾಡಿ, ಹಳ್ಳದಲ್ಲಿ ಶೇಡ್ ನಿರ್ಮಾಣ ಮಾಡಿದ್ದಾರೆ.

ಇದೇ ಸಮಯದಲ್ಲಿ ದಲಿತ ಮುಖಂಡ ಬಸವರಾಜ ತಳಕೇರಿ ಮಾತನಾಡಿ ಗ್ರಾಮದ ಕೆಲವು ಕಡೆಗಳಲ್ಲಿ ಅವರ ಮನಸ್ಸು ಇಚ್ಛೆ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿ ಸಿಕ್ಕ ಸಿಕ್ಕ ಕಡೆಗಳೆಲ್ಲ ರಸ್ತೆ ನಿರ್ಮಾಣ ಮಾಡಿ ಸರ್ಕಾರಿ ಜಾಗೆ ಗಳನ್ನು ಒತ್ತುವರಿ ಮಾಡಿಕೊಂಡು ಗ್ರಾಮದಲ್ಲಿ ಕೆಲವು ಪ್ರಭಾವಿ ರಾಜಕೀಯ ಮುಖಂಡರು ಮತ್ತು ಸರ್ಕಾರಿ ಅಧಿಕಾರಿಗಳ ಜೊತೆಗೆ ಕೊಡಿಕೊಂಡು ರಾಜಾರೋಷವಾಗಿ ಒತ್ತುವರಿ ಮಾಡುತ್ತಿದ್ದರು ಅಧಿಕಾರಿಗಳು ಮಾತ್ರ ಮೂಕ ವಿಸ್ಮಿತರಾಗಿ ಕುಳಿತಿದ್ದಾರೆ ಈ ಮಾಧ್ಯಮದ ಮೂಲಕ ಎಲ್ಲ ದಲಿತ ಸಂಘಟನೆಯ ಪರವಾಗಿ ಗ್ರಾಮದ ಒತ್ತುವರಿ ಸರ್ಕಾರಿ ಜಾಗೆಗಳನ್ನು ಸರ್ಕಾರಕ್ಕೆ ಉಳಿಸಿಕೊಳ್ಳಬೇಕು ಇಲ್ಲವಾದರೆ ನಿಮ್ಮ ಭ್ರಷ್ಟ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳು ಸಾವಳಗಿ ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಕೂಡಲೇ ಗ್ರಾಮದ ಹಳ್ಳವನ್ನು ಸಂಪೂರ್ಣವಾಗಿ ಸರ್ವೇ ಮಾಡಿ ಜಮೀನು ಒತ್ತುವರಿ ಮಾಡಿದ ಭೂಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರಾದ ಪರಶುರಾಮ ಸೂರಗೊಂಡ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಂತೇಶ ಹೋನವಾಡ, ಅಂಬರೀಶ ಮೇಲಿನಕೆರಿ, ಆನಂದ ತಿಕೋಟಾ, ಸತೀಶ ಕಾಂಬಳೆ, ಇನ್ನೂ ಅನೇಕರು ಇದ್ದರು.

ವರದಿ: ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!